ವಾಷಿಂಗ್ಟನ್: ಭಾರತೀಯ ಮೂಲದ ಸಾಯಿ ವರ್ಷಿತ್ ಕಂದುಲಾ (20), 2023ರ ಮೇ 22 ರಂದು ವೈಟ್ ಹೌಸ್ ಮೇಲೆ ಬಾಡಿಗೆಗೆ ಪಡೆದ ಟ್ರಕ್‌ನಿಂದ ದಾಳಿ ನಡೆಸಲು ಯತ್ನಿಸಿದ ಆರೋಪದಲ್ಲಿ ಗುರುವಾರದಂದು ಎಂಟು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಕಂದುಲಾ 2023ರ ಮೇ 22ರಂದು ಸೇಂಟ್ ಲೂಯಿಸ್, ಮಿಸ್ಸೌರಿಯಿಂದ ವಾಷಿಂಗ್ಟನ್ ಡಿ.ಸಿ. ಗೆ ವಿಮಾನದಲ್ಲಿ ತೆರಳಿದ್ದರು. ಅಲ್ಲದೇ ಅವರು ಒಂದು ಟ್ರಕ್ ಅನ್ನು ಬಾಡಿಗೆಗೆ ಪಡೆದಿದ್ದರು.
ಬಳಿಕ ರಾತ್ರಿ 9:35 ಕ್ಕೆ ವೈಟ್ ಹೌಸ್ ಮತ್ತು ಪಾರ್ಕ್‌ಗೆ ರಕ್ಷಣೆ ನೀಡುವ ತಡೆಗೋಡೆಗೆ ಟ್ರಕ್ ಡಿಕ್ಕಿ ಹೊಡೆಸಿದ್ದ ಕಂದುಲಾ, ಪಾದಚಾರಿ ಮಾರ್ಗಕ್ಕೆ ನುಗ್ಗಿಸಿ ಸಾರ್ವಜನಿಕರು ಗಾಬರಿಗೊಳ್ಳುವಂತೆ ಮಾಡಿದ್ದರು. ನಂತರ ಕಂದುಲಾ ವಾಹನದಿಂದ ಹೊರಬಂದು ಟ್ರಕ್‌ನ ಹಿಂಭಾಗಕ್ಕೆ ಹೋಗಿ ನಾಜಿ ಸ್ವಸ್ತಿಕಾ ಹೊಂದಿರುವ ಬ್ಯಾನರ್ ಅನ್ನು ಪ್ರದರ್ಶಿಸಿದ್ದರು. ಯುಎಸ್ ಪಾರ್ಕ್ ಪೊಲೀಸ್ ಮತ್ತು ಯುಎಸ್ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಕಂದುಲಾ ಅವರನ್ನು ಸ್ಥಳದಲ್ಲಿಯೇ ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದರು.