ಬೆಂಗಳೂರು : ಹಿರಿಯ ಸ್ಯಾಂಡಲ್ ವುಡ್ ನಟ ‘ಸರಿಗಮ ವಿಜಿ’ ನಿನ್ನೆ ವಿಧಿವಶರಾಗಿದ್ದು, ಇಂದು ಚಾಮರಾಜಪೇಟೆಯ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿದೆ. ಸರಿಗಮ ವಿಜಿ ಅವರ ಪುತ್ರ ತಂದೆಯ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು. ಈ ಮೂಲಕ ಪಂಚಭೂತಗಳಲ್ಲಿ ಸರಿಗಮ ವಿಜಿ ಲೀನರಾಗಿದ್ದಾರೆ.
ಚಾಮರಾಜ ಪೇಟೆ ರುದ್ರ ಭೂಮಿಯಲ್ಲಿ ಇಂದು ಅಂತ್ಯ ಸಂಸ್ಕಾರ ನೆರವೇರಿದೆ.. ಹಿರಿಯ ಪುತ್ರ ರೋಹಿತ್ ಸರಿಗಮ ವಿಜಿ ಅಂತ್ಯಸಂಸ್ಕಾರದ ವಿಧಿ ವಿಧಾನ ಪೂರೈಸಿದ್ದಾರೆ . 9.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ನಮನಕ್ಕೆ ವ್ಯವಸ್ಥೆ ಕೂಡ ಮಾಡಲಾಗಿತ್ತು. ನಂತರ ಚಾಮರಾಜಪೇಟೆಯ ರುಧ್ರಭೂಮಿಗೆ ಕೊಂಡೊಯ್ಯಲಾಗಿದ್ದು, ಬಲಿಜ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿದೆ.
ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಸರಿಗಮ ವಿಜಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. . ಇಂದು ಚಾಮರಾಜಪೇಟೆಯಲ್ಲಿ ಸರಿಗಮ ವಿಜಿ ಅವರ ಅಂತ್ಯಕ್ರಿಯೆ ನೆರವೇರಿದೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಕೆಲವು ನಟರು, ಗಣ್ಯರು, ಕುಟುಂಬದವರು ಹಾಜರಿದ್ದರು.
ಸರಿಗಮ ವಿಜಿ’ ಅವರು ಮದುವೆ ಮಾಡಿ ನೋಡು (1965) ಬೆಳುವಲದ ಮಡಿಲಲ್ಲಿ (1975) ಕಪ್ಪು ಕೋಲ (1980)…ಭೀಮಾ (ಆರ್. ವಿಜಯ್ಕುಮಾರ್ ಎಂದು ಮನ್ನಣೆ)ಪ್ರತಾಪ್ (1990)…ಸೂರಿ, ಮನ ಮೆಚ್ಚಿಡಾ ಸೊಸೆ (1992), ಕೆಂಪಯ್ಯ IPS (1993), ಚಿನ್ನದ ಪದಕ (1994), ಜಗತ್ ಕಿಲಾಡಿ (1998) ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸರಿಗಮ ವಿಜಿ ನಟಿಸಿದ ಸಿನಿಮಾಗಳು
• ಮದುವೆ ಮಾಡಿ ನೋಡು (1965)
• ಬೆಳುವಲದ ಮಡಿಲಲ್ಲಿ (1975)
• ಕಪ್ಪು ಕೋಲ (1980)…ಭೀಮಾ (ಆರ್. ವಿಜಯ್ಕುಮಾರ್ ಎಂದು ಮನ್ನಣೆ)
• ಪ್ರತಾಪ್ (1990)…ಸೂರಿ
• ಮನ ಮೆಚ್ಚಿಡಾ ಸೊಸೆ (1992)
• ಕೆಂಪಯ್ಯ IPS (1993)
• ಚಿನ್ನದ ಪದಕ (1994)…ವಿಜಿ
• ಜಗತ್ ಕಿಲಾಡಿ (1998)
• ಯಮಲೋಕದಲ್ಲಿ ವೀರಪ್ಪನ್ (1998)
• ದುರ್ಗಿ (2004)
• ಸ್ವಾರ್ಥರತ್ನ (2018)