ಮುಂದಿನ ತಿಂಗಳು ಈ ಮಹಾ ದೃಶ್ಯ ನಡೆಯಲಿದ್ದರೂ, ಜನವರಿ 21ರಿಂದಲೇ ಆಕಾಶದಲ್ಲಿ ಏಳು ಗ್ರಹಗಳಲ್ಲಿ ಆರು ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸಲಿವೆ.
ಮೂರು ರಿಂದ ಎಂಟು ಗ್ರಹಗಳು ಒಂದೇ ಸಾಲಿನಲ್ಲಿ ಬಂದಾಗ ಅದನ್ನು ಗ್ರಹಗಳ ಜೋಡಣೆ ಎಂದು ಕರೆಯಲಾಗುತ್ತದೆ. ಐದು ಅಥವಾ ಆರು ಗ್ರಹಗಳು ಒಟ್ಟಿಗೆ ಕಾಣಿಸುವುದನ್ನು ದೊಡ್ಡ ಜೋಡಣೆ ಎಂದು ಕರೆಯಲಾಗುತ್ತದೆ. ಐದು ಗ್ರಹಗಳ ಜೋಡಣೆ ಆರು ಗ್ರಹಗಳ ಜೋಡಣೆಗಿಂತ ಹೆಚ್ಚು ಸಾಮಾನ್ಯ. ಆದರೆ, ಏಳು ಗ್ರಹಗಳ ಜೋಡಣೆ ಅತ್ಯಂತ ಅಪರೂಪ.
ಗ್ರಹಗಳು ನೇರ ರೇಖೆಯಲ್ಲಿ ಇರುವುದಿಲ್ಲ
ಚಿತ್ರಗಳು ಮತ್ತು ರೇಖಾಚಿತ್ರಗಳಲ್ಲಿ ಗ್ರಹಗಳು ನೇರ ರೇಖೆಯಲ್ಲಿ ಇರುವಂತೆ ಕಾಣಿಸಿದರೂ ವಾಸ್ತವದಲ್ಲಿ ಅವು ನೇರ ರೇಖೆಯಲ್ಲಿ ಇರುವುದಿಲ್ಲ. ಗ್ರಹಗಳು ಸೂರ್ಯನ ಸುತ್ತ ವಿಭಿನ್ನ ಕಕ್ಷೆಯಲ್ಲಿ ಸುತ್ತುವುದರಿಂದ ಅವುಗಳು ನೇರ ರೇಖೆಯಲ್ಲಿ ಬರುವುದು ಅಸಾಧ್ಯ.
ನಾಸಾ ಹೇಳುವಂತೆ, “ಗ್ರಹಗಳು ಆಕಾಶದಲ್ಲಿ ಒಂದು ರೇಖೆಯಲ್ಲಿ ಇರುವಂತೆ ಕಾಣಿಸುತ್ತದೆ ಎಂಬುದು ನಿಜ. ಆ ರೇಖೆಯನ್ನು ಗ್ರಹವಲಯ ಎಂದು ಕರೆಯಲಾಗುತ್ತದೆ ಮತ್ತು ಅದು ಸೌರವ್ಯೂಹದ ತಲವನ್ನು ಪ್ರತಿನಿಧಿಸುತ್ತದೆ. ಗ್ರಹಗಳು ಸೂರ್ಯನ ಸುತ್ತ ತಿರುಗುವಾಗ ನಾವು ಅವುಗಳನ್ನು ಒಂದು ರೇಖೆಯಲ್ಲಿ ನೋಡುತ್ತೇವೆ.”
ಎಲ್ಲಿ ನೋಡಬೇಕು
ಈ ಗ್ರಹಗಳ ಜೋಡಣೆಯನ್ನು ನೋಡಲು ಬೆಳಕು ಕಡಿಮೆ ಇರುವ ಪ್ರದೇಶಕ್ಕೆ ಹೋಗಿ. ಬಯಲು ಪ್ರದೇಶ ಅಥವಾ ಬೆಟ್ಟದ ಮೇಲೆ ನಿಂತು ನೋಡುವುದು ಉತ್ತಮ. ಆಕಾಶ ಸ್ಪಷ್ಟವಾಗಿದ್ದರೆ ನೀವು ಬರಿಗಣ್ಣಿನಿಂದಲೇ ಹೆಚ್ಚಿನ ಗ್ರಹಗಳನ್ನು ನೋಡಬಹುದು. ಯುರೇನಸ್ ಮತ್ತು ನೆಪ್ಚೂನ್ ಅನ್ನು ನೋಡಲು ದೂರದರ್ಶಕ ಬೇಕಾಗಬಹುದು.
ಜನವರಿ ತಿಂಗಳಲ್ಲಿ ಕ್ವಾಡ್ರಾಂಟಿಡ್ ಉಲ್ಕಾವೃಷ್ಟಿಯಿದ್ದರೆ, ಫೆಬ್ರವರಿ ತಿಂಗಳು ಈ ಗ್ರಹಗಳ ಜೋಡಣೆಯಿಂದ ಇನ್ನಷ್ಟು ವಿಶೇಷವಾಗಲಿದೆ.