ಬೆಂಗಳೂರು: ಮಕರ ಸಂಕ್ರಾಂತಿ ವೇಳೆ ಪೂರ್ಣ ಸ್ನಾನಕ್ಕೆಂದು ನದಿಗೆ ಇಳಿದ ಮೂವರು ವ್ಯಕ್ತಿಗಳು ಸಾವನ್ನಪಿದ ಪ್ರತ್ಯೇಕ ಘಟನೆ ನಡೆದಿದೆ.
ಹಾವೇರಿ, ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಮಂಗಳವಾರ ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಇಳಿದ ಮೂವರು ನೀರು ಪಾಲಾಗಿದ್ದಾರೆ.
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿಯ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಇಳಿದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ತಿಪ್ಪೇಶ್(21) ನೀರುಪಾಲಾಗಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೊಂಕಣ ಗ್ರಾಮದ ಬಳಿ ವರದಾ ನದಿಯಲ್ಲಿ ಇಳಿದ ರಮೇಶ ಕಡ್ಡೇರ(32) ನೀರು ಪಾಲಾಗಿದ್ದಾರೆ. ಕೊಪ್ಪಳ ತಾಲೂಕಿನ ಕಾತರಕಿ ಜಾಕ್ವೆಲ್ ಸಮೀಪ ಸ್ನಾನ ಮಾಡಲು ಹೋಗಿದ್ದ ಶೇಖರಗೌಡ ನಾಗನಗೌಡ್ರ(30) ಎಂಬುವರು ನೀರು ಪಾಲಾಗಿದ್ದಾರೆ.