ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನಿಗೆ ಕಾಣಿಕೆ ರೂಪದಲ್ಲಿ ಬಂದಿದ್ದ ಅರ್ಧ ಕೆಜಿ ಚಿನ್ನ ಕಳವು ಮಾಡಿದ್ದ ಗುತ್ತಿಗೆ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ.
ಪೆಂಚಾಲಯ್ಯ ಬಂಧಿತ ಆರೋಪಿ. ಈತ ಕಳೆದ ಒಂದು ವರ್ಷದಲ್ಲಿ ಚಿನ್ನದ ಬಿಸ್ಕೆಟ್ ಸೇರಿದಂತೆ ಆಭರಣಗಳನ್ನು ಕಳವು ಮಾಡಿದ್ದ. ಸುಮಾರು 46 ಲಕ್ಷ ರೂಪಾಯಿ ಮೌಲ್ಯದ 650 ಗ್ರಾಂ ಚಿನ್ನ ಕಳವು ಮಾಡಿದ್ದಾನೆ. ಬಾಲಾಜಿಗೆ ಭಕ್ತರು ಸಲ್ಲಿಸುವ ಕಾಣಿಕೆಯನ್ನು ಪರಕಾಮಣಿಯಲ್ಲಿ ವಿಂಗಡಿಸಲಾಗುತ್ತದೆ. ಅಲ್ಲಿ ಕೆಲಸ ಮಾಡುತ್ತಿದ್ದ ಪೆಂಚಾಲಯ್ಯ ಚಿನ್ನ ಕಳವು ಮಾಡುತ್ತಿದ್ದ. ಜನವರಿ 12ರಂದು ಕೃತ್ಯವೆಸಗುವಾಗಲೇ ಸಿಕ್ಕಿಬಿದ್ದಿದ್ದ.