ಬೆಂಗಳೂರು: ಬೆಂಗಳೂರಿನಲ್ಲಿ ಜನವರಿ 17ರಂದು ಅಮೆರಿಕ ಕಾನ್ಸುಲೇಟ್ ಕಾರ್ಯಾರಂಭ ಮಾಡಲಿದೆ. ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ ನಲ್ಲಿ ಕಚೇರಿ ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಅಮೆರಿಕ ವೀಸಾ ಸೇವೆಗೆ ಅವಕಾಶ ಲಭ್ಯವಾಗಲಿದೆ.
ಇದರಿಂದ ಕನ್ನಡಿಗರು ಇನ್ನು ಚೆನ್ನೈ ಸೇರಿ ಬೇರೆ ರಾಜ್ಯಗಳಿಗೆ ಹೋಗುವ ಬದಲು ಬೆಂಗಳೂರಿನಲ್ಲಿಯೇ ಅಮೆರಿಕ ವೀಸಾ ಮತ್ತು ಸಂಬಂಧಿತ ಸೇವೆ ಪಡೆಯಬಹುದಾಗಿದೆ. ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ ನಲ್ಲಿ ಈಗಾಗಲೇ ಯುನೈಟೆಡ್ ಸ್ಟೇಟ್ಸ್ ಕಮರ್ಷಿಯಲ್ ಸರ್ವಿಸ್ ಕಚೇರಿ ಇದ್ದು, ಅದೇ ಸ್ಥಳದಲ್ಲಿ ಧೂತವಾಸ ಕಚೇರಿ ಕಾರ್ಯರಂಭ ಮಾಡಲಿದೆ.
ಬೆಂಗಳೂರಿನಲ್ಲಿಯೇ ಅಮೆರಿಕ ವೀಸಾ ಸೇವೆ ಸಿಗುವುದರಿಂದ ಜನರಿಗೆ ಹಣ ಮತ್ತು ಸಮಯ ಉಳಿತಾಯವಾಗಲಿದ್ದು, ಅನುಕೂಲವಾಗಲಿದೆ.