ದಳಪತಿ ವಿಜಯ್ ನಟನೆಯ ‘ವರಿಸು’ ಚಿತ್ರಕ್ಕೆ ಎರಡು ವರ್ಷದ ಸಂಭ್ರಮ 11-01-2025 11:18AM IST / No Comments / Posted In: Featured News, Live News, Entertainment 2023 ಜನವರಿ 11ರಂದು ತೆರೆಕಂಡಿದ್ದ ದಳಪತಿ ವಿಜಯ್ ನಟನೆಯ ‘ವರಿಸು’ ಬಿಡುಗಡೆಯಾಗಿ ಇಂದಿಗೆ ಎರಡು ವರ್ಷಗಳಾಗಿದ್ದು, ಚಿತ್ರತಂಡ ಈ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಆಕ್ಷನ್ ಫ್ಯಾಮಿಲಿ ಎಂಟರ್ಟೈನ್ ಮೆಂಟ್ ಕಥಾಹಂದರ ಹೊಂದಿರುವ ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವುದಲ್ಲದೆ ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ಚಿತ್ರವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ಪಿವಿಪಿ ಸಿನಿಮಾ ಬ್ಯಾನರ್ ನಲ್ಲಿ ದಿಲ್ ರಾಜು ಮತ್ತು ಸಿರಿಶ್ ನಿರ್ಮಾಣ ಮಾಡಿದ್ದು, ತಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ದಳಪತಿ ವಿಜಯ್ ಸೇರಿದಂತೆ ಆರ್. ಶರತ್‌ಕುಮಾರ್, ಶಾಮ್, ಶ್ರೀಕಾಂತ್, ರಶ್ಮಿಕಾ ಮಂದಣ್ಣ, ಪ್ರಕಾಶ್ ರಾಜ್, ಜಯಸುಧಾ, ಯೋಗಿ ಬಾಬು, ಗಣೇಶ್ ವೆಂಕಟ್ರಾಮನ್, ಸಂಗೀತಾ, ಸಂಜನಾ ತಿವಾರಿ, ಅದ್ವೈತ್ ವಿನೋದ್, ನಂದಿನಿ ರೈ, ತೆರೆ ಹಂಚಿಕೊಂಡಿದ್ದು, ಪ್ರವೀಣ್ ಕೆಎಲ್ ಸಂಕಲನ, ಹಾಗೂ ಕಾರ್ತಿಕ್ ಪಳನಿ ಛಾಯಾಗ್ರಹಣವಿದೆ. View this post on Instagram A post shared by Sri Venkateswara Creations (@srivenkateswaracreations)