ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ 10ನೇ ಆರೋಪಿ ಶರದ್ ಕಲಾಸ್ಕರ್ ಗೆ ಜಾಮೀನು ನೀಡಲಾಗಿದೆ.
ಬೆಂಗಳೂರು ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನಿಂದ ಜಾಮೀನು ಮಂಜೂರು ಮಾಡಲಾಗಿದೆ. 2018ರ ಸೆಪ್ಟೆಂಬರ್ ನಿಂದ ಶರದ್ ಕಲಾಸ್ಕರ್ ನ್ಯಾಯಾಂಗ ಬಂಧನದಲ್ಲಿದ್ದರು. 2017ರ ಸೆಪ್ಟಂಬರ್ 5ರಂದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಲಾಗಿತ್ತು.
ಅವರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಸೆರೆಯಲ್ಲಿದ್ದ ಎಲ್ಲಾ ಆರೋಪಿಗಳಿಗೆ ಈಗ ಜಾಮೀನು ಮಂಜೂರಾಗಿದೆ.