ಅಮೃತಸರ ಪೊಲೀಸ್ ಠಾಣೆಯ ಬಳಿ ನಿಗೂಢ ಸ್ಫೋಟ ಸಂಭವಿಸಿದ್ದು, ಆತಂಕಕ್ಕೆ ಕಾರಣವಾಗಿರುವ ಘಟನೆ ಪಂಜಾಬ್ ನ ಅಮೃತಸರದಲ್ಲಿ ನಡೆದಿದೆ.
ಅಮೃತಸರದ ಗುಮ್ಟಾಲಾ ಪೊಲೀಸ್ ಠಾಣೆಯ ಹೊರಗೆ ಸ್ಫೋಟ ಸಂಭವಿಸಿದ್ದು, ಕಾರ್ ರೇಡಿಯೇಟರ್ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ.
ಪೊಲೀಸ್ ಠಾಣೆಯ ಉಸ್ತುವಾರಿ ಎ ಎಸ್ ಐ ರಜಿಂದರ್ ಸಿಂಗ್ ಕೆಲಸದಲ್ಲಿದ್ದಾಗ ಪೊಲೀಸ್ ಠಾಣೆಯ ಬಳಿ ಏಕಾಏಕಿ ಸ್ಫೋಟ ಸಂಭವಿಸಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕಾರಿನಿಂದ ಕೂಲಂಟ್ ಸೋರಿಕೆಯಾಗುತ್ತಿರುವುದು ಪತ್ತೆಯಾಗಿದೆ ಎಂದು ಎಸಿಪಿ ಶಿವದರ್ಶನ್ ತಿಳಿಸಿದ್ದಾರೆ.
ವಾಹನ ತಪಾಸಣೆಗೆ ಮೆಕ್ಯಾನಿಕ್ ಗಳನ್ನು ಕರೆಸಲಾಗಿದ್ದು, ಪರಿಶೀಲನೆ ಬಳಿಕ ಅದು ರೇಡಿಯೇಟರ್ ಬ್ಲಾಸ್ಟ್ ಎಂದು ತಿಳಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.