ಬೆಂಗಳೂರು : ಬಸ್ ಪಾಸ್, ತರಕಾರಿ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಗಳ ನಡುವೆ ಮದ್ಯಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಶೀಘ್ರವೇ ಬಿಯರ್ ದರ ಏರಿಕೆಯಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ಬಿಯರ್ ಬೆಲೆ ಶೀಘ್ರದಲ್ಲೇ ಪ್ರತಿ ಬಾಟಲಿಗೆ ಸುಮಾರು 10 ರಿಂದ 50 ರೂ.ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಪ್ರತಿ ಬಿಯರ್ ಬಾಟಲಿಗೆ ಕನಿಷ್ಠ 10 ರಿಂದ 50 ರೂ.ಗಳವರೆಗೆ ಅದರಲ್ಲಿನ ಅಲ್ಕೋಹಾಲ್ಅಂಶದ ಮೇಲೆ ದರ ಹೆಚ್ಚಾಗಲಿದೆ. ಕಡಿಮೆ ಆಲ್ಕೋಹಾಲ್ ಅಂಶವಿರುವ ಬಿಯರ್ಗಳ ದರ ಹೆಚ್ಚಾಗಲ್ಲ, ಆದರೆ, ಸ್ಟ್ರಾಂಗ್ ಬಿಯರ್ಗಳ ಬೆಲೆ ಭಾರಿ ಏರಿಕೆಯಾಗಲಿದೆ. ಬುಲೆಟ್ ಬಿಯರ್ ಬೆಲೆ ಸದ್ಯ 98 ರೂ. ಇದ್ದರೆ, ಅದು 145 ರೂ.ಗೆ ಏರಿಕೆಯಾಗಲಿದೆ. ಪರಿಷ್ಕೃತ ದರ ಇದೇ 20ರಿಂದ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಉದ್ದೇಶಿತ ಮದ್ಯದ ಬೆಲೆ ಪರಿಷ್ಕರಣೆಯು ಭಾರತೀಯ ನಿರ್ಮಿತ ಮದ್ಯ ಮಾರಾಟ ಮತ್ತು ಅಬಕಾರಿ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸಿದ್ದರಾಮಯ್ಯ ಸರ್ಕಾರವು ಬಿಯರ್ ಬೆಲೆಯನ್ನು ಹೆಚ್ಚಿಸಲು ಸಜ್ಜಾಗಿದೆ.
ವಿಶೇಷ ಸೂಚನೆ : ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ