ಮಂಡ್ಯ: ಮಾಜಿ ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಹೊಸ ಬಾಡಿಗೆ ಮನೆ ಮಾಡಿದ್ದಾರೆ. ಅದರ ಪೂಜೆಯನ್ನು ಕೂಡ ನೆರವೇರಿಸಿದ್ದಾರೆ.
ಚಾಮುಂಡೇಶ್ವರಿ ನಗರದ ಎರಡನೇ ಕ್ರಾಸ್ ನಲ್ಲಿ ನಟ ಅಂಬರೀಶ್ ಮನೆ ಬಾಡಿಗೆ ಪಡೆದು ನೆಲೆಸಿದ್ದರು. ರಾಜಕಾರಣ ಪ್ರವೇಶಿಸಿದ ಸುಮಲತಾ ಅಂಬರೀಶ್ ಅವರು ಕೂಡ ಇದೆ ಮನೆಯಲ್ಲಿ ವಾಸವಾಗಿದ್ದರು. ಸಂಸದರಾಗಿ ಆಯ್ಕೆಯಾಗಿದ್ದರು. ಅಂಬರೀಶ್ ಮತ್ತು ಸುಮಲತಾ ಅವರಿಗೆ ಆ ಮನೆ ಅದೃಷ್ಟದ ಮನೆ ಎಂದೇ ಹೇಳಲಾಗಿತ್ತು.
2024ರ ಲೋಕಸಭೆ ಚುನಾವಣೆ ಮುಗಿದ ಆರೇಳು ತಿಂಗಳ ನಂತರ ಸುಮಲತಾ ಅವರು ಚಾಮುಂಡೇಶ್ವರಿ ನಗರದ ಮನೆಯಿಂದ ಬಂದೀಗೌಡ ಬಡಾವಣೆಯಲ್ಲಿ ಹೊಸ ಮನೆ ಬಾಡಿಗೆ ಪಡೆದುಕೊಂಡಿದ್ದಾರೆ.