ಚಿಕ್ಕಮಗಳೂರು: ಮೋಸ್ಟ್ ವಾಂಟೆಡ್ 6 ನಕ್ಸಲರು ಶರಣಾಗಲು ನಿರ್ಧಾರ ಕೈಗೊಂಡಿದ್ದು, ಸರ್ಕಾರ ನಮ್ಮ ಬೇಡಿಕೆಗೆ ಒಪ್ಪಿರುವ ಹಿನ್ನೆಲೆಯಲ್ಲಿ ಶರಣಾಗುತ್ತಿದ್ದೇವೆ ಎಂದು ಚಿಕ್ಕಮಗಳೂರಿನಲ್ಲಿ ನಕ್ಸಲ್ ನಾಯಕಿ ಮುಂಡಗಾರು ಲತಾ ಹೇಳಿದ್ದಾರೆ.
ನಾವು ಸಮಾಜದ ಮುಖ್ಯ ವಾಹಿನಿಗೆ ಬರುತ್ತೇವೆ. ನಮ್ಮ ಬೇಡಿಕೆಯನ್ನು ಎರಡು ಸಮಿತಿ ಸರ್ಕಾರಕ್ಕೆ ತಲುಪಿಸಿವೆ. ನಾವು ಪ್ರಜಾತಂತ್ರ, ಸಾಂವಿಧಾನಿಕ ಹೋರಾಟ ನಡೆಸುತ್ತೇವೆ. ಕೊನೆಯವರೆಗೂ ಜನರ ಪರ ನಿಂತು ಹೋರಾಡುತ್ತೇವೆ. ಯಾವ ಕಾರಣಕ್ಕೂ ಜನಪರ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನಮ್ಮ ಉಸಿರು ಇರುವವರೆಗೂ ಹೋರಾಟ ಮಾಡುತ್ತೇವೆ. ಸರ್ಕಾರ ನಮ್ಮ ಬೇಡಿಕೆಗೆ ಒಪ್ಪಿರುವ ಹಿನ್ನೆಲೆಯಲ್ಲಿ ನಾವು ಶರಣಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.