ನಾಳೆ ಬಿಡುಗಡೆಯಾಗಲಿದೆ ”ಗಜರಾಮ” ಚಿತ್ರದ ”ಕನಸಲೇ ಕವಿತೆ” ಹಾಡು 06-01-2025 10:54AM IST / No Comments / Posted In: Featured News, Live News, Entertainment ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಅಭಿನಯದ ”ಗಜರಾಮ” ಮುಂದಿನ ತಿಂಗಳು ಫೆಬ್ರವರಿ 7ರಂದು ತೆರೆ ಮೇಲೆ ಬರಲಿದ್ದು, ಚಿತ್ರತಂಡ ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ. ನಾಳೆ ಗಜರಾಮ ಚಿತ್ರದ ಕನಸಲೇ ಕವಿತೆ ಎಂಬ ಮೆಲೋಡಿ ಹಾಡನ್ನು ಬಿಡುಗಡೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಈ ಹಾಡಿಗೆ ಧ್ವನಿಯಾಗಿದ್ದು, ಚಿನ್ಮಯಿ ಬಾವಿಕೆರೆ ಸಾಹಿತ್ಯ ಬರೆದಿದ್ದಾರೆ. ಸುನಿಲ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಲೈಫ್ ಲೈನ್ ಫಿಲ್ಮ್ಸ್ ಬ್ಯಾನರ್ ನಲ್ಲಿ ನರಸಿಂಹಮೂರ್ತಿ ವಿ ನಿರ್ಮಾಣ ಮಾಡಿದ್ದು, ರಾಜವರ್ಧನ್ ಗೆ ಜೋಡಿಯಾಗಿ ತಪಸ್ವಿನಿ ಪೂಣಚ್ಚ ಅಭಿನಯಿಸಿದ್ದಾರೆ. ದೀಪಕ್, ಕಬೀರ್ ಸಿಂಗ್, ಶರತ್ ಲೋಹಿತಾಸ್ವ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಧನಂಜಯ ಬಿ ನೃತ್ಯ ನಿರ್ದೇಶನ, ಡಿಫರೆಂಟ್ ಡ್ಯಾನಿ, ಟೈಗರ್ ಶಿವು ಅವರ ಸಾಹಸ ನಿರ್ದೇಶನ, ಜ್ಞಾನೇಶ್ ಬಿ ಮಾತಾಡ್ ಸಂಕಲನ, ಹಾಗೂ ಕೆ ಎಸ್ ಚಂದ್ರಶೇಖರ್ ಛಾಯಾಗ್ರಹಣವಿದೆ. View this post on Instagram A post shared by Anand Audio (@aanandaaudio)