ನವದೆಹಲಿ: ಗ್ರೂಪ್ ಡಿ ಹುದ್ದೆಗಳ ನೇಮಕಾತಿ ವಿದ್ಯಾರ್ಹತೆಯಲ್ಲಿ ರೈಲ್ವೆ ಮಂಡಳಿ ಬದಲಾವಣೆ ಮಾಡಿದೆ. 3200 ಲೆವೆಲ್-1 ಗ್ರೂಪ್ ಡಿ ಹುದ್ದೆಗಳಿಗೆ ನಡೆಸುವ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ.
ಹೊಸ ನಿಯಮದ ಪ್ರಕಾರ 10ನೇ ತರಗತಿ ಅಥವಾ ಐಟಿಐ ಡಿಪ್ಲೋಮಾ ಅಥವಾ ತತ್ಸಮಾನ ವಿದ್ಯಾರ್ಹತೆ, ನ್ಯಾಷನಲ್ ಕೌನ್ಸಿಲ್ ಫಾರ್ ವೋಕೇಷನಲ್ ಟ್ರೈನಿಂಗ್ ನೀಡುವ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಪ್ರಮಾಣ ಪತ್ರ ಇವುಗಳ ಪೈಕಿ ಯಾವುದಾದರೂ ಒಂದು ಶೈಕ್ಷಣಿಕ ಅರ್ಹತೆ ಪಡೆದಿದ್ದರೆ ಸಾಕಾಗುತ್ತದೆ ಎನ್ನಲಾಗಿದೆ.
ರೈಲ್ವೆ ಶಿಕ್ಷಕರು ಸೇರಿ ಇತರ 1030 ಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಫೆಬ್ರವರಿ 6 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ಹೇಳಲಾಗಿದೆ.