ಮುಂಬೈ: ಆರ್ಟ್ ರೂಮ್‌ನಲ್ಲಿ 12 ವರ್ಷದ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ 38 ವರ್ಷದ ನಾಗರಿಕ ಶಾಲೆಯ ದೈಹಿಕ ತರಬೇತಿ ಶಿಕ್ಷಕನನ್ನು ಭೋಯಿವಾಡ ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 27 ರಂದು ಈ ಘಟನೆ ನಡೆದಿದ್ದು, ಮತ್ತೊಬ್ಬ ಶಿಕ್ಷಕಿಗೆ ವಿಷಯ ತಿಳಿದ ನಂತರ ಜನವರಿ 2 ರಂದು ಪ್ರಕರಣ ದಾಖಲಿಸಲಾಗಿದೆ. ದೂರಿನ ಪ್ರಕಾರ, ಶಿಕ್ಷಕ ತರಗತಿಗೆ ಆಗಮಿಸಿ, ಒಳಗಿನಿಂದ ಬಾಗಿಲು ಮುಚ್ಚಿ, ಹುಡುಗಿಯನ್ನು ಅಪ್ಪಿಕೊಳ್ಳುವಂತೆ ಕೇಳಿ ಕಿರುಕುಳ ನೀಡಿದ್ದಾನೆ.
ಘಟನೆಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಆಕೆಗೆ ಹೇಳಿದ್ದ ಎನ್ನಲಾಗಿದೆ. ಆದರೆ, ನಂತರ ಬಾಲಕಿ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದು, ಅವರು ಮತ್ತೊಬ್ಬ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಶಿಕ್ಷಕಿ ಪ್ರಾಂಶುಪಾಲರಿಗೆ ವಿಚಯ ತಿಳಿಸಿದ್ದು, ನಂತರ ಅವರು ಬಾಲಕಿಯ ಪೋಷಕರಿಗೆ ತಿಳಿಸಿದ್ದಾರೆ.