ಕೋಲಾರ: ಕೋಲಾರದ ನೂರ್ ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಮಾಡಲಾಗಿದೆ. ಪ್ರೇಯಸಿಯ ಮನೆಗೆ ಹೋಗಿ ಹಿಂತಿರುಗುವಾಗ ಉಸ್ಮಾನ್ ಎಂಬುವನ ಮೇಲೆ ಮೇಲೆ ದಾಳಿ ನಡೆಸಲಾಗಿದೆ.
28 ವರ್ಷದ ಉಸ್ಮಾನ್ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. 5 ವರ್ಷದ ಹಿಂದೆ ಜಬಿನಾ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದ. ಕಿಡ್ನಿ ವೈಫಲ್ಯವಾಗಿ ಜಬಿನಾ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ನೋಡಲು ಬಂದಿದ್ದ ಸಂಬಂಧಿ ಯುವತಿಯನ್ನು ಉಸ್ಮಾನ್ ಪ್ರೀತಿಸಲು ಆರಂಭಿಸಿದ್ದ.
ಪತ್ನಿ ಜಬಿನಾ ಮಹಿಳಾ ಠಾಣೆಗೆ ದೂರು ನೀಡಿದ್ದು, ಉಸ್ಮಾನ್ ನಿಂದ ದೂರವಾಗಿ ತವರಿಗೆ ಹೋಗಿದ್ದರು. ನಿನ್ನೆ ರಾತ್ರಿ ಯುವತಿ ನಿವಾಸಕ್ಕೆ ಹೋಗಿದ್ದ ಉಸ್ಮಾನ್ ಪ್ರೇಯಸಿ ಮನೆಯಿಂದ ವಾಪಸ್ ಬರುವಾಗ ರಸ್ತೆಯಲ್ಲೇ ಅಟ್ಟಾಡಿಸಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಕೋಲಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.