ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ ಮತ್ತೊಂದು ವಿನೂತನ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿದೆ. ಅಂತರಕ್ಷದಲ್ಲಿಯೂ ಬೀಜದ ಮೊಳಕೆ ಮೂಡಿಸಿ ಜೀವಾಂಕುರ ಮಾಡುವಲ್ಲಿ ಯಶಸ್ವಿಯಾಗಿದೆ. ಅತ್ಯಲ್ಪ ಗುರುತ್ವಾಕರ್ಷಣೆಯ ಶಕ್ತಿಯುಳ್ಳ ಪ್ರದೇಶದಲ್ಲಿ ಬೀಜದ ಮೊಳಕೆ ಮೂಡಿಸುವ ಮೊದಲ ಪ್ರಯೋಗ ಇದಾಗಿದ್ದು, ಅಂತರಿಕ್ಷದಲ್ಲಿ ಗಿಡಗಳು ಹೇಗೆ ಬೆಳವಣಿಗೆ ಕಾಣುತ್ತವೆ ಎನ್ನುವ ಸಂಶೋಧನೆಗೆ ದಾರಿ ಮಾಡಿಕೊಟ್ಟಿದೆ.
ಸ್ಪೀಡ್ ಎಕ್ಸ್ ಜೊತೆ ಕಳುಹಿಸಿದ್ದ ಅಲಸಂದೆ ಕಾಳು ಶೂನ್ಯ ಗುರುತ್ತದಲ್ಲಿಯೂ ಮೊಳಕೆಯೊಡೆದಿದ್ದು 4 ದಿನದಲ್ಲಿ ಬಾಹ್ಯಾಕಾಶದಲ್ಲಿ ಜೀವ ಅರಳಿಸುವ ಭಾರತದ ಮೊದಲ ಪ್ರಯೋಗ ಯಶಸ್ವಿಯಾಗಿದ್ದು, ಇಸ್ರೋ ಸಾಧನೆಗೆ ಮೆಚ್ಚುಗೆಯ ಸುರಿಮಳೆಯಾಗಿದೆ. ಇದು ಸಣ್ಣ ಹೆಜ್ಜೆಯಾಗಿದ್ದು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ ಎಂದು ಹೆಸರು ಅಧ್ಯಕ್ಷ ಡಾ. ಸೋಮನಾಥ್ ತಿಳಿಸಿದ್ದಾರೆ.
ಕಳೆದ ಡಿಸೆಂಬರ್ 30ರಂದು ಉಡಾವಣೆಗೊಂಡ ಪಿ.ಎಸ್.ಎಲ್.ವಿ. –ಸಿ60 ರಾಕೆಟ್ ಮೂಲಕ ಅಲಸಂದೆ ಬೀಜವನ್ನು ಇಸ್ರೋ ಅಂತರಿಕ್ಷಕ್ಕೆ ಕಳುಹಿಸಿದ್ದು, 4ನೇ ದಿನಗಳಲ್ಲಿ ಬೀಜಗಳಲ್ಲಿ ಮೊಳಕೆ ಮೂಡಿದ್ದು, ಅದರ ಫೋಟೋವನ್ನು ಇಸ್ರೋ ಬಿಡುಗಡೆ ಮಾಡಿದೆ. ಭಾರತ ಶೀಘ್ರವೇ ಬಾಹ್ಯಾಕಾಶ ಯಾನಕ್ಕೆ ಉದ್ದೇಶಿಸಿದೆ. ಭವಿಷ್ಯದಲ್ಲಿ ತನ್ನದೇ ಆದ ಬಾಹ್ಯಾಕಾಶ ಕೇಂದ್ರ ಸ್ಥಾಪನೆ ಉದ್ದೇಶವನ್ನು ಹೊಂದಿದ್ದು, ಇದರೊಂದಿಗೆ ಅನ್ಯ ಗ್ರಹಗಳ ಸಂಶೋಧನೆ ಗುರಿ ಹಾಕಿಕೊಂಡಿದೆ. ಇಂತಹ ಯಾನದ ವೇಳೆ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಸುದೀರ್ಘ ಕಾಲ ಉಳಿದುಕೊಂಡಾಗ ಅವರಿಗೆ ಪೌಷ್ಟಿಕ ಆಹಾರ ಅತ್ಯಂತ ಅಗತ್ಯವಾಗಿರುತ್ತದೆ. ಹೀಗಾಗಿ ಬಾಹ್ಯಾಕಾಶದಲ್ಲಿ ಬೆಳೆಯುವ ತಂತ್ರಜ್ಞಾನ ಸಿದ್ಧಿಸಿದರೆ ವಿಜ್ಞಾನಿಗಳ ಪಾಲಿಗೆ ವರದಾನವಾಗಲಿದೆ ಎಂದು ಹೇಳಲಾಗಿದೆ.
Life sprouts in space! 🌱 VSSC’s CROPS (Compact Research Module for Orbital Plant Studies) experiment onboard PSLV-C60 POEM-4 successfully sprouted cowpea seeds in 4 days. Leaves expected soon. #ISRO #BiologyInSpace pic.twitter.com/QG7LU7LcRR
— ISRO (@isro) January 4, 2025