alex Certify ಭಕ್ತರಿಗೆ ಮುಖ್ಯ ಮಾಹಿತಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ತಿರುಪತಿ ಮಾದರಿ ಕ್ಯೂ ವ್ಯವಸ್ಥೆ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಕ್ತರಿಗೆ ಮುಖ್ಯ ಮಾಹಿತಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ತಿರುಪತಿ ಮಾದರಿ ಕ್ಯೂ ವ್ಯವಸ್ಥೆ ಜಾರಿ

ಮಂಗಳೂರು: ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ತಿರುಪತಿ ಮಾದರಿಯಲ್ಲಿ ಕ್ಯೂ ಸಿಸ್ಟಂ ಜಾರಿಗೆ ತರಲಾಗುತ್ತಿದೆ.

ಜನವರಿ 7ರಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ನೂತನ ಸಂಕೀರ್ಣ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನಕ್ಕೆ ಬರುವ ಭಕ್ತರಿಗೆ ತಿರುಪತಿ ಮಾದರಿಯಲ್ಲಿ ಸುಸಜ್ಜಿತ ಸೌಕರ್ಯ ಒಳಗೊಂಡ ಸರತಿ ಸಾಲಿನ ವ್ಯವಸ್ಥೆಯ ನೂತನ ಸಂಕೀರ್ಣ ಶ್ರೀ ಸಾನಿಧ್ಯ ನಿರ್ಮಾಣ ಮಾಡಲಾಗಿದೆ.

ಸರದಿಯಲ್ಲಿ ಭಕ್ತರು ಕಾಯಲು 16 ಭವನ ನಿರ್ಮಿಸಲಾಗಿದ್ದು, ಪ್ರತಿ ಭವನದಲ್ಲಿ 800 ಭಕ್ತರು ತಂಗಲು ಅವಕಾಶವಿದೆ. ಇಲ್ಲಿ ಸರತಿಯಲ್ಲಿ ನಿಂತು ಕಾಯಬೇಕಿಲ್ಲ, ಕುರ್ಚಿ ವ್ಯವಸ್ಥೆ ಇದೆ. ಸರದಿ ಮುಂದೆ ಸಾಗುತ್ತಿದ್ದಂತೆ ಮುಂದಿನ ಭವನಕ್ಕೆ ಭಕ್ತರು ಸ್ಥಳಾಂತರವಾಗಲಿದ್ದಾರೆ. ಇಲ್ಲಿ ಮಕ್ಕಳಿಗೆ ಆರೈಕೆ ಕೊಠಡಿ, ಶೌಚಗ್ರಹಗಳನ್ನು ನಿರ್ಮಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...