ನಂದಮೂರಿ ಬಾಲಕೃಷ್ಣ ಅಭಿನಯದ ‘ಡಾಕು ಮಹಾರಾಜ್’ ಚಿತ್ರದ ಮೂರನೇ ಹಾಡು ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಥಮನ್ ಎಸ್ ಮತ್ತು ವಾಗ್ದೇವಿ ಧ್ವನಿಯಲ್ಲಿ ಮೂಡಿ ಬಂದಿರುವ ‘ದಬಿಡಿ ದಿಬಿಡಿ’ ಎಂಬ ಈ ಹಾಡಿನಲ್ಲಿ ನಂದಮೂರಿ ಬಾಲಕೃಷ್ಣ ಜೊತೆ ಊರ್ವಶಿ ರೌಟೆಲಾ ಹೆಜ್ಜೆ ಹಾಕಿದ್ದು, ಕಾಸರ್ಲಾ ಶ್ಯಾಮ್ ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರವನ್ನು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ & ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್ ನಲ್ಲಿ ಸೂರ್ಯದೇವರ ನಾಗ ವಂಶಿ ಮತ್ತು ಸಾಯಿ ಸೌಜನ್ಯ ನಿರ್ಮಾಣ ಮಾಡಿದ್ದು, ನಂದಮೂರಿ ಬಾಲಕೃಷ್ಣ ಸೇರಿದಂತೆ ಬಾಬಿ ಡಿಯೋಲ್, ಪ್ರಜ್ಞಾ ಜೈಸ್ವಾಲ್, ಶ್ರದ್ಧಾ ಶ್ರೀನಾಥ್, ಚಾಂದಿನಿ ಚೌಧರಿ ಬಣ್ಣ ಹಚ್ಚಿದ್ದಾರೆ.ಕಣ್ಣನ್ ಸಂಕಲನ, ವಿಜಯ್ ಕಾರ್ತಿಕ್ ಛಾಯಾಗ್ರಾಹಣ, ಭಾನು-ನಂದು ಸಂಭಾಷಣೆ ಹಾಗೂ ವಿ ವೆಂಕಟ್ ಅವರ ಸಾಹಸ ನಿರ್ದೇಶನವಿದೆ.