ಬೆಂಗಳೂರು : ಅರ್ಚಕ, ಪುರೋಹಿತರನ್ನು ಮದುವೆಯಾಗುವ ಬ್ರಾಹ್ಮಣ ಯುವತಿಯರಿಗೆ 3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.
ಬ್ರಾಹ್ಮಣ ಅಭಿವೃದ್ಧಿ ಮ೦ಡಳಿಯ ಮೂಲಕ ಈವರೆಗೆ ಕಾಂಗ್ರೆಸ್ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆಗಳು ಇದಾಗಿದೆ. ಅರುಂಧತಿ ಯೋಜನೆಯಡಿ ಬಡ ಬ್ರಾಹ್ಮಣ ಹುಡುಗಿಯ ಮದುವೆ ಸ೦ದರ್ಭದಲ್ಲಿ ₹25 ಸಾವಿರ ಪ್ರೋತ್ಸಾಹ ಧನ ಹಾಗೂ ಮೈತ್ರೇಯಿ ಯೋಜನೆಯಡಿ ಅರ್ಚಕರು ಮತ್ತು ಪುರೋಹಿತರನ್ನು ವಿವಾಹವಾಗುವ ಬ್ರಾಹ್ಮಣ ಯುವತಿಯರಿಗೆ ವರ್ಷಕ್ಕೆ ₹1 ಲಕ್ಷದಂತೆ ಒಟ್ಟು 3 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಚಕರು ಹಾಗೂ ಪುರೋಹಿತರನ್ನು ವಿವಾಹ ಆಗಲು ಯುವತಿಯರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿಯೂ ಮೈತ್ರಿ ಯೋಜನೆ ಜಾರಿಗೆ ತರಲಾಗಿದೆ.
ಅರ್ಜಿ ಸಲ್ಲಿಕೆ ವಿಧಾನ
ಇತರ ಆರ್ಥಿಕ ನೆರವು ಯೋಜನೆಗಳಂತೆ, ಕರ್ನಾಟಕದ ಅರುಂಧತಿ ಯೋಜನೆ / ಮೈತ್ರಿ ಯೋಜನೆಗೆ ಆನ್ಲೈನ್ ಅರ್ಜಿ ಆಹ್ವಾನಿಸುತ್ತದೆ.
ನೋಂದಣಿ ನಮೂನೆಗಳನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧಿಕೃತ ವೆಬ್ಸೈಟ್ನಲ್ಲಿ (https://ksbdb.karnataka.gov.in/english) ಲಭ್ಯ.
ಮೈತ್ರಿ ಯೋಜನೆ ಅಥವಾ ಅರುಂಧತಿ ಯೋಜನೆಗಾಗಿ ನೋಂದಣಿ ಮಾಡಲು ಹೆಡರ್ನಲ್ಲಿರುವ “ಸೈನ್ ಇನ್” ಟ್ಯಾಬ್ನಲ್ಲಿ ಕ್ಲಿಕ್ ಮಾಡಿ.
ದಂಪತಿಯು ಮಂಡಳಿಯ ವೆಬ್ಸೈಟ್ನಲ್ಲಿ ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬಹುದು. KSBDB ವೆಬ್ಸೈಟ್ನಲ್ಲಿ ನೋಂದಣಿ ಮಾಡಿದ ನಂತರವೇ ಮೈತ್ರಿ ಯೋಜನೆ ಮತ್ತು ಅರುಂಧತಿ ಯೋಜನೆಯ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.
ಅರುಂಧತಿ ಯೋಜನೆ
ಬಡ ಬ್ರಾಹ್ಮಣ ಹುಡುಗಿಯ ಮದುವೆ ಸ೦ದರ್ಭದಲ್ಲಿ ₹25 ಸಾವಿರ ಪ್ರೋತ್ಸಾಹ ಧನ
ಮೈತ್ರೇಯಿ ಯೋಜನೆ
ಅರ್ಚಕರು ಮತ್ತು ಪುರೋಹಿತರನ್ನು ವಿವಾಹವಾಗುವ ಬ್ರಾಹ್ಮಣ ಯುವತಿಯರಿಗೆ ವರ್ಷಕ್ಕೆ ₹1 ಲಕ್ಷದಂತೆ ಒಟ್ಟು 13 ಲಕ್ಷ ಪ್ರೋತ್ಸಾಹ ಧನ
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮೂಲಕ ಬ್ರಾಹ್ಮಣರ ಶ್ರೇಯೋಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆಗಳು#DevelopSchemes #KarnatakaGovt pic.twitter.com/7Ow2gFMcE8
— DIPR Karnataka (@KarnatakaVarthe) January 3, 2025