ಬೆಂಗಳೂರು: ಪ್ರೀತಿಸಿದ ಯುವತಿ ದೂರಾಗಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ.
ಸತೀಶ್ ಕುಮಾರ್ ಆತ್ಮಹತ್ಯೆಗೆ ಶರಣಾದ ಯುವಕ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಪ್ರೀತಿಸಿದ ಯುವತಿ ದೂರಾದಳೆಂದು ನೊಂದು ಮನೆಯಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾನೆ.
ಯುವತಿ ಹಾಗೂ ಯುವಕ ಸತೀಶ್ ಕುಮಾರ್ ಕಾಲೆಜಿಗೆ ಹೋಗುವಾಗಲಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಯುವಕನ ವಿರುದ್ಧ ಯುವತಿ ಕುಟುಂಬದವರು ದೂರು ನೀಡಿದ್ದರು. ಯುವತಿಗೆ ಸತೀಶ್ ಕುಮಾರ್ ಕಿರುಕುಳ ನೀಡುತ್ತಿರಿವುದಾಗಿ ಆರೋಪಿಸಿ ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವಕನನ್ನು ಠಾಣೆಗೆ ಕರೆಸಿ ಪೊಲೀಸರು ಬುದ್ಧಿವಾದ ಹೇಳಿದ್ದರು. ಆ ಬಳಿಕ ಕೆಲ ಕಾಲ ಯುವತಿಯಿಂದ ದೂರಾಗಿದ್ದ. ತೀವ್ರವಾಗಿ ಮನನೊಂದ ಯುವಕ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.