ಟ್ಯೂಷನ್ ಟೀಚರ್ ಓರ್ವ 10ನೇ ತರಗತಿ ವಿದ್ಯಾರ್ಥಿನಿ ಕಿಡ್ನ್ಯಾಪ್ ಮಾಡಿದ್ದು, ಆರೋಪಿ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.
ಕನಕಪುರ ಮೂಲದ ಟ್ಯೂಷನ್ ಟೀಚರ್ ಅಭಿಷೇಕ್ ಎಂಬಾತ 10ನೇ ತರಗತಿ ವಿದ್ಯಾರ್ಥಿನಿಯನ್ನು ಪ್ರೀತಿ-ಪ್ರೇಮ ಎಂದು ಪುಸಲಾಯಿಸಿ ಅಪಹರಿಸಿದ್ದಾಗಿ ಬಾಲಕಿ ತಂದೆ ಬೆಂಗಳೂರಿನ ಜೆ.ಪಿ,ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ
ನವೆಂಬರ್ 23ರಂದು ಎಂದಿನಂತೆ ವಿದ್ಯಾರ್ಥಿನಿ ಟ್ಯೂಷನ್ ಗೆ ಬಂದಿದ್ದಳು. ಟ್ಯೂಷನ್ ಕ್ಲಾಸ್ ಮುಗಿದು ರಾತ್ರಿಯಾದರೂ ವಿದ್ಯಾರ್ಥಿನಿ ಮನೆಗೆ ವಾಪಾಸ್ ಆಗಿಲ್ಲ. ಮನೆಯವರು ರಾತ್ರಿ ಟ್ಯೂಷನ್ ಸೆಂಟರ್ ಬಳಿ ಹೋದಾಗ ವಿದ್ಯಾರ್ಥಿನಿಯನ್ನು ಟೀಚರ್ ಕರೆದುಕೊಂಡು ಹೋಗಿರುವುದು ಗೊತ್ತಾಗಿದೆ. ಮನೆ ರೂಂ ನಲ್ಲಿಯೇ ಆರೋಪಿ ತನ್ನ ಮೊಬೈಲ್ ಬಿತ್ಟು ಹೋಗಿದ್ದಾನೆ. ಕಳೆದ 40 ದಿನಗಳಿಂದ ಆರೋಪಿ ವಿದ್ಯಾರ್ಥಿನಿ ಜೊತೆ ತಲೆಮರೆಸಿಕೊಂಡಿದ್ದು, ಫೋನ್ ಪೇ, ಗೂಗಲ್ ಪೇ ಸೇರಿದಂತೆ ಯಾವುದೇ ಆನ್ ಲೈನ್ ಮೂಲಕ ಕೂಡ ಹಣ ಎಲ್ಲಿಯೂ ಪಾವತಿಸುತ್ತಿಲ್ಲ.
ಬೆಂಗಳೂರು, ರಾಮನಗರ ಸೇರಿದಂತೆ ಎಲ್ಲೆಡೆ ಪೊಲಿಸರು ಹುಡುಕಾಟ ನಡೆಸಿದರೂ ಟೀಚರ್ ಹಾಗೂ ವಿದ್ಯಾರ್ಥಿನಿ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿ ಬಗ್ಗೆ ಯಾರಾದರೂ ಸುಳಿವು ನೀಡಿದಲ್ಲಿ ಬಹುಮಾನ ಘೋಷಿಸುವುದಾಗಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.