ಬೆಂಗಳೂರು : ರಾಜ್ಯ ಸರ್ಕಾರದಿಂದ ‘ವಿಕಲಚೇತನ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಜ.4ರಂದು ‘ಸಾಂದರ್ಭಿಕ ರಜೆ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ದಿನಾಂಕ: 04.01.2025 ರಂದು ದಿವಂಗತ ಲೂಯಿ ಬೈಲ್ ರವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುವ ವಿಶ್ವ ಬೈಲ್ ದಿನದ ಆಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ದೃಷ್ಟಿ ದೋಷವುಳ್ಳ ವಿಕಲಚೇತನ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯಿಸಿ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನೌಕರರು ಹಾಜರಾತಿ ಪ್ರಮಾಣ ಪತ್ರವನ್ನು ಒದಗಿಸುವ ಹಾಗೂ ಈ ವಿಶೇಷ ಸಾಂದರ್ಭಿಕ ರಜೆ ದಿನಕ್ಕೆ ಸರ್ಕಾರದಿಂದ ಯಾವುದೇ ದಿನ ಭತ್ಯೆ ಅಥವಾ ಪ್ರಯಾಣ ಭತ್ಯೆಯ ಕ್ರೈಮ್ನ್ನು ಪರಿಗಣಿಸಲಾಗುವುದಿಲ್ಲವೆಂಬ ಷರತ್ತುಗಳಿಗೊಳಪಟ್ಟು ದಿನಾಂಕ:04.01.2025 ರಂದು ಒಂದು ದಿನ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಆದೇಶಿಸಿದೆ.