ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ಸಾಲ ಪಡೆಯಲು ಸರ್ಕಾರ ಗ್ಯಾರಂಟಿ ನೀಡಿದೆ. 4 ಸಾರಿಗೆ ನಿಗಮಗಳ ಸಿಬ್ಬಂದಿಗೆ ಭವಿಷ್ಯ ನಿDi ಬಾಕಿ ಇದ್ದು, ಇಂಧನ, ಬಾಕಿ ಹೊಣೆಗಾರಿಕೆಯನ್ನು ಸಾರಿಗೆ ನಿಗಮಗಳು ಉಳಿಸಿಕೊಂಡಿವೆ. ಹೀಗಾಗಿ ಬಾಕಿ ಹಣ ಪಾವತಿಗೆ 4 ಸಾರಿಗೆ ನಿಗಮಗಳಿಗೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಸರ್ಕಾರದ ಅನುಮತಿ ನೀಡಲಾಗಿದೆ.
ಸರ್ಕಾರದಿಂದ ಸಾಲ ಪಡೆಯಲು ಷರತ್ತು ಬದ್ಧ ಖಾತರಿ ನೀಡಲಾಗಿದೆ. ಸಾರಿಗೆ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ಡೀಸೆಲ್ ಶುಲ್ಕ, ಭವಿಷ್ಯನಿಧಿ ವಂತಿಗೆ ಪಾವತಿಸಲು ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ತೆಗೆದುಕೊಳ್ಳಲು ಸರ್ಕಾರ ಅನುಮತಿ ನೀಡಿವೆ.
ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎನ್ನುವ ವಿಪಕ್ಷಗಳ ಆರೋಪವನ್ನು ರಾಜ್ಯ ಸರ್ಕಾರ ನಿರಾಕರಿಸಿದ್ದು, ಸಂಸ್ಥೆಗಳ ವಿವಿಧ ಹೊಣೆಗಾರಿಕೆ ನಿರ್ವಹಿಸಲು ಸಾಲದ ಮೊರೆ ಹೋಗಿದೆ. ಮಂಗಳವಾರ ಈ ಬಗ್ಗೆ ಆದೇಶ ಹೊರಡಿಸಲಾಗಿದೆ.
ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಒಟ್ಟು 6330.25 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ.
3 ನಿಗಮಗಳಲ್ಲಿ 2012ರಿಂದ ವಿದ್ಯಾರ್ಥಿ ಬಸ್ ಪಾಸ್ ದರ ಪರಿಷ್ಕರಣೆ ಮಾಡಿಲ್ಲ. ಬಿಎಂಟಿಸಿಯಲ್ಲಿ 2015 ರಿಂದ ವಿದ್ಯಾರ್ಥಿ ಪಾಸ್ ಪರಿಷ್ಕರಣೆ ಮಾಡಿಲ್ಲ. ಡೀಸೆಲ್ ದರ ಹೆಚ್ಚಳ, ಬಿಡಿ ಭಾಗಗಳ ದರ ಹೆಚ್ಚಳ, ಸಾರಿಗೆ ಸಂಸ್ಥೆಗಳ ಸಿಬ್ಬಂದಿಯ ವೇತನ ಪರಿಷ್ಕರಣೆ ಮೊದಲಾದ ಕಾರಣದಿಂದ ಹೆಚ್ಚುವರಿ ಹೊರೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಗಳು ನಷ್ಟಭರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಾಲ ತೆಗೆದುಕೊಳ್ಳಲು ಸರ್ಕಾರ ಅನುಮತಿ ನೀಡಿದೆ.