ಬೆಂಗಳೂರು : ರೈಲ್ವೇ, ಜಲಶಕ್ತಿ ಇಲಾಖೆಯಲ್ಲಿ ಶೀಘ್ರವೇ 60,000 ಹುದ್ದೆಗಳ ನೇಮಕಾತಿ ಮಾಡಲಾಗುತ್ತದೆ ಎಂದು ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಇಲಾಖೆ ಸಚಿವ ವಿ. ಸೋಮಣ್ಣ ಘೋಷಣೆ ಮಾಡಿದ್ದಾರೆ.
ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈಲ್ವೇ, ಜಲಶಕ್ತಿ ಇಲಾಖೆಯಲ್ಲಿ ಶೀಘ್ರವೇ 60,000 ಉದ್ಯೋಗಿಗಳ ನೇಮಕ ಮಾಡಲಾಗುತ್ತದೆ, ಕನ್ನಡಿಗರು ಇದರ ಸದುಪಯೋಗ ಪಡೆಯಬೇಕು ಎಂದರು.
ರೈಲ್ವೆ ಇಲಾಖೆಯ ನೇಮಕಾತಿಗಳಿಗೆ ಹಿಂದಿ ಭಾಷೆಯಲ್ಲಿ ಮಾತ್ರ ಪರೀಕ್ಷೆಗಳು ನಡೆಯುತ್ತಿದ್ದವು. ನಾನು ಸಚಿವನಾದ ಮೇಲೆ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಯಿತು. ಇದನ್ನು ಬಳಸಿಕೊಂಡು ಶೇ 20ರಿಂದ 25ರಷ್ಟು ಕನ್ನಡಿಗರು ಆಯ್ಕೆಯಾದರೆ ಹೋರಾಟದ ಶ್ರಮ ಸಾರ್ಥಕವಾಗುತ್ತದೆ’ ಎಂದರು.