ಬೆಂಗಳೂರು: ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಂಕ್ ಖರ್ಗೆ, ಯಾರು ಎಷೇ ಚೀರಾಡಲಿ, ಬಟ್ಟೆಯನ್ನು ಬೇಕಾದರೂ ಹರಿದುಕೊಲ್ಲಲಿ ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ನನ್ನ ರಾಜೀನಾಮೆ ಕೆಳಲು ವಿಜಯೇಂದ್ರ ಸುಪ್ರೀಂ ಕೋರ್ಟಾ? ಎಂದು ಪ್ರಶ್ನಿಸಿದರು.
ಗುತ್ತಿಗೆದಾರರನ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಯಾವುದಾದರೂ ದಾಖಲೆ ಇದ್ದರೆ ಬಿಜೆಪಿಯವರು ತೋರಿಸಲಿ. ರಾಜು ಕಪನೂರ್ ನನ್ನ ಆಪ್ತ ಅಲ್ಲ. ರಾಜು ಕಪನೂರ್ ಕಾಂಗ್ರೆಸ್ ಸೇರುವ ಮುನ್ನ ಬಿಜೆಪಿಯಲ್ಲಿಯೇ ಇದ್ದರು. ಬಿಜೆಪಿಯ ಎಸ್ ಸಿ ಮೋರ್ಚಾ ಅಧ್ಯಕ್ಷರಾಗಿದ್ದರು ಎಂದರು.
ವಿಜಯೇಂದ್ರ ವಿರುದ್ಧ ಮನಿಲ್ಯಾಂಡರಿಂಗ್ ಕೇಸ್ ದಾಖಲಾಗಿದೆ, ಆದರೂ ವಿಜಯೇಂದ್ರ ಯಾಕೆ ರಾಜೀನಾಮೆ ಕೊಡುತ್ತಿಲ್ಲ? ಕಲಬುರಗಿ ಮುತ್ತಿಗೆ ಹಾಕಲು ಎಷ್ಟು ಜನ ಬರ್ತೀರಿ ಎಂದು ಮೊದಲೇ ಹೇಳಿಬಿಡಿ ಅವರಿಗೆ ಟೀ ವ್ಯವಸ್ಥೆ ಮಾಡಿಸುತ್ತೇ. ಇಲ್ಲದಿದ್ದರೆ ನೀರನ್ನೂ ಕೊಟ್ಟಿಲ್ಲ ಅಂತಾ ಪ್ರತಿಭಟನೆ ಮಾಡ್ತೀರಾ ಎಂದು ವಾಗ್ದಾಳಿ ನಡೆಸಿದರು.
ಆಂಧೋಲನ ಸಮಿತಿ, ಸತ್ಯ ಸೋಧನ ಸಮಿತಿಯನ್ನು ಮಾಡಲಿ. ಮೊದಲು ಅದನ್ನು ಬಿಜೆಪಿಯಲ್ಲಿಯೇ ಮಾಡಿ ಸತ್ಯ ಶೋಧನೆ ನಡೆಸಲಿ ಎಂದರು.