ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಡಿ.ಕೆ.ಸುರೇಶ್, ನಿರ್ಮಾಪಕರಾಗಿರುವ ಮುನಿರತ್ನ, ಒಳ್ಳೆ ನಟನೆಯನ್ನೂ ಮಾಡ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಮೊಟ್ಟೆ ದಾಳಿ ಬಗ್ಗೆ ನನ್ನ ಮೇಲೆ, ಡಿ.ಕೆ.ಶಿವಕುಮಾರ್ ಮೇಲೆ, ಕಾಂಗ್ರೆಸ್ ನಾಯಕಿ ಕುಸಿಮಾ ಅವರ ಮೇಲೆ ನೇರ ಆರೋಪ ಮಾಡಿದ್ದಾರೆ. ಆಸಿಡ್ ದಾಳಿ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದರು.
ಮೊಟ್ಟೆ ದಾಳಿ ಪ್ರಕರಣದ ವಿಡಿಯೋವನ್ನು ನಾನೂ ನೋಡಿದ್ದೇನೆ. ಆಸಿಡ್ ದಾಳಿ ಎನ್ನುತ್ತಿದ್ದಂತೆ ಆಸಿಡ್ ದಾಲಿಯಾಗಿದೆ. ಆಸಿಡ್ ದಾಳಿ ಎಂದು ಮೂರು ಬಾರಿ ಹೇಳಿದ ಮೂರು ಸೆಕೆಂಡ್ ನಲ್ಲೇ ಮೊಟ್ಟೆ ದಾಳಿ ಆಗೋಯ್ತು, ಆಸಿಡ್ ದಾಳಿ ಆಗೋಯ್ತು. ಕನ್ನಡ ಚಿತ್ರರಂಗದಲ್ಲಿ ಮುನಿರತ್ನ ಸೇವೆ ಸಲ್ಲಿಸಿದವರು. ಕಥೆಗಳನ್ನು ತಿರುಚಿ ಹೇಗೆ ಬೇಕಾದ್ರೂ ಚಿತ್ರ ತೋರಿಸ್ತೀವಿ ಎಂದು ಕುರುಕ್ಷೇತ್ರ ಸಿನಿಮಾದಲ್ಲೇ ತೋರಿಸಿದ್ದಾರೆ. ಈಗ ಒಳ್ಳೆ ಡ್ರಾಮ ಅಸ್ಕ್ರಿಪ್ಟ್ ಮಾಡಿ ಕೊಟ್ಟಿದ್ದಾರೆ ಎಂದು ಹೇಳಿದರು.
ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸಿನಿಮಾಗಳು ಕಡಿಮೆಯಾಗಿವೆ. ಒಳ್ಳೆ ಸಿನಿಮಾಗಳು ಕಡಿಮೆಯಾಗಿವೆ. ಹಾಗಾಗಿ ನಾನೇ ಯಾಕೆ ನಟನೆ ಮಾಡಾಬಾರ್ದು ಎಂದು ಕಥೆ ಬರೆದು ಒಳ್ಳೆ ಡ್ರಾಮಾ ಸ್ಕ್ರಿಪ್ಟ್ ರೆಡಿ ಮಾಡಿ ಕೊಟ್ಟಿದ್ದಾರೆ ಎಂದು ತಿರುಗೇಟು ನೀಡಿದರು.