ಬೀದರ್: ಡೆತ್ ನೋಟ್ ಬರೆದಿಟ್ಟು ರೈಲಿಗೆ ತಲೆಕೊಟ್ಟು ಗುತ್ತಿಗೆದಾರ ಆತ್ಮಹತ್ಯೆ ಮಾಡಿರುವ ಪ್ರಕರಣ ಸಂಬಂಧ ಇಬ್ಬರು ಹೆಡ್ ಕಾನ್ಸ್ ಟೇಬಲ್ ಗಳನ್ನು ಅಮಾನತು ಮಾಡಲಾಗಿದೆ.
ಗುತ್ತಿಗೆದಾರ ಸಚಿನ್ ಡೆತ್ ನೋಟ್ ಬರೆದಿಟ್ಟು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್ ನೋಟ್ ನೋಡಿದ ಕುಟುಂಬದವರು ತಕ್ಷಣ ಬೀದರ್ ಗಾಂಧಿ ಬಜಾರ್ ಠಾಣೆಗೆ ಬಂದು ಸಚಿನ್ ಅವರನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದರು. ಆದರೆ ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಲಾಗಿದೆ. ನಾಪತ್ತೆಯಾಗಿದ್ದ ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕರ್ತವ್ಯ ಲೋಪ, ದೂರು ದಾಖಲಿಸಿಕೊಳ್ಳಲು ನಿರ್ಲಕ್ಷ್ಯ ಆರೋಪದಡಿ ಬೀದರ್ ಗಾಂಧಿ ಬಜಾರ್ ಠಾಣೆಯ ಇಬ್ಬರು ಹೆಡ್ ಕಾನ್ಸ್ಟೇಬಲ್ ಗಳಾದ ರಾಜೇಶ್ ಹಾಗೂ ಶಾಮಲಾ ಅವರನ್ನು ಅಮಾನತುಗೊಳಿಸಿ ಬೀದರ್ ಎಸ್ ಪಿ ಪ್ರದೀಪ್ ಗಂಟಿ ಆದೇಶ ಹೊರಡಿಸಿದ್ದಾರೆ.