ಚಿತ್ರದುರ್ಗ : ರಾಜ್ಯದಲ್ಲಿ ಭೀಭತ್ಸ ಕೃತ್ಯ ಘಟನೆಯೊಂದು ನಡೆದಿದ್ದು, ನವಜಾತ ಶಿಶುವನ್ನು ಶಾಲೆ ಆವರಣದಲ್ಲಿ ಹೂಳಲಾಗಿದೆ.
ಖಾಸಗಿ ಶಾಲೆ ಆವರಣದಲ್ಲಿ ಶಿಶುವಿನ ಮೃತದೇಹ ಪತ್ತೆಯಾಗಿದೆ.ಚಳ್ಳಕೆರೆ ಗೇಟ್ ಬಳಿ ವೆಂಕಟೇಶ್ವರ ಶಾಲೆಯ ಬಳಿ ಅರೆಬರೆ ಹೂತಿದ್ದ ಶಿಶುವಿನ ಶವ ಪತ್ತೆಯಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
ಅರ್ಧದೇಹವಿರುವ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ನಾಯಿಗಳು ಕಚ್ಚಿ ಎಳೆದಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.