ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಬುಧವಾರ ಆಭರಣ ಅಂಗಡಿಯಿಂದ 300 ಗ್ರಾಂ ತೂಕದ ಚಿನ್ನಾಭರಣ ಮತ್ತು 5 ಲಕ್ಷ ರೂ. ಲೂಟಿ ಮಾಡಲಾಗಿದೆ.
ಜಲೇಶ್ವರ ಕಮರ್ದ ಪೊಲೀಸ್ ಠಾಣಾ ವ್ಯಾಪ್ತಿಯ ಕಮರ್ದಾ ಬಜಾರ್ನಲ್ಲಿ ಲೂಟಿ ನಡೆದಿದೆ. ಆಭರಣ ಅಂಗಡಿ ಮಾಲೀಕರು ಕುಡಿಯುವ ನೀರು ತರಲು ಹೊರಗೆ ಹೋಗಿದ್ದರು. ಆ ವೇಳೆ ದುಷ್ಕರ್ಮಿಗಳು ಆಭರಣ ಮಳಿಗೆಗೆ ನುಗ್ಗಿ ಚಿನ್ನಾಭರಣ ಚೀಲ ಹಾಗೂ ಖಜಾನೆಯಲ್ಲಿದ್ದ 5 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳು ತೆಗೆದುಕೊಂಡು ಹೋಗಿದ್ದ ಚಿನ್ನಾಭರಣ ಚೀಲದಲ್ಲಿ 300 ಗ್ರಾಂ ತೂಕದ ಆಭರಣಗಳಿದ್ದವು ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಈ ಚಿನ್ನಾಭರಣಗಳ ಮಾರುಕಟ್ಟೆ ಮೌಲ್ಯ ಅಂದಾಜು 21 ಲಕ್ಷ ರೂ.
ದರೋಡೆಯಾದ ಬಗ್ಗೆ ಮಾಹಿತಿ ಪಡೆದ ಕಮರ್ದಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.