ಉಡುಪಿ: ಅಡಿಕೆ ಕೊಯ್ಯುವ ವೇಳೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆ ಶಂಕರನಾರಾಯಣ ಸಮೀಪ ಉಳ್ಳೂರು ಅಬ್ಬಿಬೇರು ಬಳಿ ನಡೆದಿದೆ.
ಜಾರ್ಖಂಡ್ ಮೂಲದ ರಾಮ್ ಕಿಶನ್ ಓರಾನ್(34) ಮೃತಪಟ್ಟ ಕಾರ್ಮಿಕ. ಅಡಿಕೆ ಕೊಯ್ಯುವ ಸಂದರ್ಭದಲ್ಲಿ ಕೊಕ್ಕೆ ವಿದ್ಯುತ್ ತಂತಿಗೆ ತಗುಲಿ ದುರಂತ ಸಂಭವಿಸಿದೆ.
ರಾಮ್ ಕಿಶನ್ ಅಡಕೆ ಕೊಯ್ಯುವ ಕೊಕ್ಕೆ ಹಿಡಿದು ಮರದಿಂದ ಅಡಿಕೆ ಗೊನೆ ಎಳೆಯುವ ವೇಳೆ ವಿದ್ಯುತ್ ತಂತಿಗೆ ತಾಗಿದೆ. ವಿದ್ಯುತ್ ಪ್ರವಹಿಸಿ ರಾಮ್ ಕಿಶನ್ ನೆಲಕ್ಕೆ ಬಿದ್ದಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಸಿದ್ದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿದ್ದು, ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಶಂಕರನಾರಾಯಣ ಠಾಣೆಯಲ್ಲಿ ಈ ಬಗ್ಗೆ ಕೇಸು ದಾಖಲಾಗಿದೆ.