ಬೆಂಗಳೂರು : ಆಪ್ತೆ ಶ್ವೇತಾಗೌಡರಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವರ್ತೂರು ಪ್ರಕಾಶ್ ವಿಚಾರಣೆಗೆ ಹಾಜರಾಗಿದ್ದಾರೆ.
ಪುಲಕೇಶಿ ಉಪನಗರದ ಎಸಿಪಿ ಕಚೇರಿಗೆ ವರ್ತೂರು ಪ್ರಕಾಶ್ ಬಂದಿದ್ದು, ಎಸಿಪಿ ಗಿರೀಶ್ ವರ್ತೂರು ಪ್ರಕಾಶ್ ವಿಚಾರಣೆ ನಡೆಸಲಿದ್ದಾರೆ.
ಚಿನ್ನದ ಅಂಗಡಿ ಮಾಲೀಕರಿಗೆ ಮಹಿಳೆಯಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವರ್ತೂರು ಪ್ರಕಾಶ್ ಅವರಿಗೆ ನೋಟಿಸ್ ನೀಡಿದ್ದಾರೆ.ಶ್ವೇತಾ ಎಂಬ ಮಹಿಳೆಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದರು. ವರ್ತೂರು ಪ್ರಕಾಶ್ ಅವರ ಹೆಸರು ಹೇಳಿ ವರ್ತಕರ ಬಳಿ ಮಹಿಳೆ ಚಿನ್ನ ಪಡೆದುಕೊಂಡಿದ್ದಾರೆ. ಸುಮಾರು ಎರಡೂವರೆ ಕೋಟಿ ರೂಪಾಯಿ ಚಿನ್ನವನ್ನು ಮಹಿಳೆ ಖರೀದಿಸಿದ್ದಾರೆ. ಚಿನ್ನ ಪಡೆಯುವಾಗ ವರ್ತೂರು ಪ್ರಕಾಶ್ ಮನೆಯ ವಿಳಾಸವನ್ನು ನೀಡಿದ್ದಾರೆ. ಚಿನ್ನದ ಅಂಗಡಿ ತೆರೆಯುವುದಾಗಿ ಹೇಳಿ ವಂಚಿಸಲಾಗಿದೆ. ಈ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲವೆಂದು ವರ್ತೂರು ಪ್ರಕಾಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಚಿನ್ನ ಖರೀದಿಸಿ 2 ಕೋಟಿಗೂ ಹೆಚ್ಚು ವಂಚನೆ ಎಸಗಿದ ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆಯನ್ನು ಪೊಲೀಸರು ಬಂಧಿಸಿದ್ದರು.ಗಣ್ಯರ ಹೆಸರು ಬಳಸಿಕೊಂಡು ಚಿನ್ನ ಖರೀದಿಸಿ ಕೋಟ್ಯಾಂತರ ರೂ ಹಣ ಪಾವತಿಸದೇ ವಂಚಿಸಿದ ಮಾಜಿ ಸಚಿವರ ಸ್ನೇಹಿತೆಯನ್ನು ಪುಲಕೇಶಿ ನಗರದ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ.