ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆ ಹೊಣೆಯನ್ನು ಇಸ್ರೇಲ್ ಹೊತ್ತುಕೊಂಡಿದೆ. ಇಸ್ಮಾಯಿಲ್ ಹತ್ಯೆ ಮಾಡಿದ್ದು ನಾವೇ ಎಂದು ಇಸ್ರೇಲ್ ರಕ್ಷಣಾ ಸಚಿವರು ಹೇಳಿದ್ದಾರೆ. ಇಸ್ಮಾಯಿಲ್ ಹತ್ಯೆ ಬಗ್ಗೆ ಇಸ್ರೇಲ್ ನಿಂದ ಮೊದಲ ಬಾರಿಗೆ ಹೇಳಿಕೆ ನೀಡಲಾಗಿದೆ. ಜುಲೈ 31 ರಂದು ಇರಾನ್ ನಲ್ಲಿ ನಡೆದ ಸ್ಪೋಟದಲ್ಲಿ ಇಸ್ಮಾಯಿಲ್ ಹತ್ಯೆ ಮಾಡಲಾಗಿತ್ತು.
ಇದೀಗ ಟೆಹ್ರಾನ್‌ನಲ್ಲಿ ಹಮಾಸ್‌ನ ಮಾಜಿ ನಾಯಕ ಹನಿಯೆಹ್ ಕೊಂದಿರುವುದಾಗಿ ಇಸ್ರೇಲ್ ಒಪ್ಪಿಕೊಂಡಿದೆ. ಯೆಮೆನ್‌ನ ಹೌತಿ ಬಂಡುಕೋರರ ನಾಯಕತ್ವವನ್ನು ಸೇನೆಯು “ಶಿರಚ್ಛೇದನ” ಮಾಡಲಿದೆ ಎಂದು ಎಚ್ಚರಿಕೆ ನೀಡಿದ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಈ ವರ್ಷದ ಆರಂಭದಲ್ಲಿ ಟೆಹ್ರಾನ್‌ನಲ್ಲಿ ಹಮಾಸ್ ಮಾಜಿ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರನ್ನು ಕೊಂದಿರುವುದಾಗಿ ಎಂದು ಸೋಮವಾರ ಒಪ್ಪಿಕೊಂಡಿದ್ದಾರೆ.
ನಾವು ಹೌತಿಗಳ ಮೇಲೆ ದಾಳಿ ಮಾಡುತ್ತೇವೆ. ಅವರ ನಾಯಕತ್ವವನ್ನು ಶಿರಚ್ಛೇದ ಮಾಡುತ್ತೇವೆ. ನಾವು ಹನಿಯೆಹ್, ಸಿನ್ವಾರ್ ಮತ್ತು ನಸ್ರಲ್ಲಾ ಅವರನ್ನು ಟೆಹ್ರಾನ್, ಗಾಜಾ ಮತ್ತು ಲೆಬನಾನ್‌ನಲ್ಲಿ ಮಾಡಿದಂತೆ ನಿರ್ಮೂಲನೆ ಮಾಡುತ್ತೇವೆ. ಇಸ್ರೇಲ್ ವಿರುದ್ಧ ದಾಳಿ ಮಾಡುವವರನ್ನು IDF(ಇಸ್ರೇಲಿ ಮಿಲಿಟರಿ) ಕತ್ತರಿಸುತ್ತದೆ ಎಂದು ಹೇಳಿದ್ದು, ಜುಲೈನಲ್ಲಿ ಇರಾನ್ ರಾಜಧಾನಿಯಲ್ಲಿ ಹನಿಯೆಹ್ ಹತ್ಯೆಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ. ಇಲ್ಲಿಯವರೆಗೆ ಇಸ್ರೇಲ್ ಹನಿಯೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿರಲಿಲ್ಲ,