ಉಡುಪಿ: ಟೂರಿಸ್ಟ್ ಬೋಟ್ ಪಲ್ಟಿಯಾಗಿ ನೀರುಪಾಲಾಗಿದ್ದ ರೈಡರ್ ಶವವಾಗಿ ಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರು ಮೂಲದ ಪ್ರವಾಸಿಗ ಪ್ರಶಾಂತ್ ಎಂಬುವವರನ್ನು ರೈಡ್ ಗೆ ಕರೆದೊಯ್ದಿದ್ದ ವೇಳೆ ಈ ದುರಂತ ಸಂಭವಿಸಿದೆ. ಪ್ರವಾಸಿಗ ಪ್ರಶಾಂತ್ ಲೈಫ್ ಜಾಕೇಟ್ ಧರಿಸಿದ್ದರಿಂದ ಬಚಾವ್ ಆಗಿದ್ದು, ಅವರನ್ನು ರಕ್ಷಿಸಲಾಗಿದೆ.
ಬರೋಬ್ಬರಿ 36 ಗಂಟೆಗಳ ಬಳಿಕ ಬೋಟ್ ರೈಡರ್ ಶವ ಪತ್ತೆಯಾಗಿದ್ದು, ಹೊಸಪೇಟೆ ರುದ್ರಭೂಮಿ ಹಿಂಭಾಗ ಸಮುದ್ರತೀರದಲ್ಲಿ ಶವ ಪತ್ತೆಯಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ರೋಹಿದಾಸ್ (41) ಎಂದು ಗುರುತಿಸಲಾಗಿದೆ. ರೋಹಿದಾಸ್ ಶನಿವಾರ ಸಂಜೆ ತ್ರಾಸಿ ಬೀಚ್ ಸಮುದ್ರ ತೀರದಲ್ಲಿ ಬೋಟ್ ಮಗುಚಿ ನೀರುಪಾಲಾಗಿದ್ದರು.