ಚೆನ್ನೈ: ಕಠಿಣ ಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ ಸಂಸ್ಥೆಯ 20 ಉದ್ಯೋಗಿಗಳಿಗೆ ತಮಿಳುನಾಡಿನ ಚೆನ್ನೈ ಮೂಲದ ಸುರ್ಮೌಂಟ್ ಲಾಜಿಸ್ಟಿಕ್ಸ್ ಸಲ್ಯೂಷನ್ಸ್ ಪ್ರೈ. ಲಿ. ಕಂಪನಿಯು ಕಾರ್ ಮತ್ತು ಬೈಕ್ ಗಳನ್ನು ಉಡುಗೊರೆಯಾಗಿ ನೀಡಿದೆ
ಸಂಸ್ಥೆಯ ನೌಕರರ ಶ್ರಮ ಮತ್ತು ಬದ್ಧತೆಗೆ ಅನುಗುಣವಾಗಿ ಟಾಟಾ ಕಾರುಗಳು, ಆಕ್ಟಿವಾ ಸ್ಕೂಟರ್ ಹಾಗೂ ರಾಯಲ್ ಎನ್ಫೀಲ್ಡ್ ಬೈಕುಗಳನ್ನು ಉದ್ಯೋಗಿಗಳಿಗೆ ನೀಡಲಾಗಿದೆ. ಇದರಿಂದ ಉದ್ಯೋಗಿಗಳಿಗೆ ಉತ್ತೇಜನ ಸಿಗಲಿದೆ. ಉನ್ನತ ಗುರಿ ಸಾಧನೆಗೆ ಸ್ಫೂರ್ತಿ ನೀಡಿದಂತಾಗುತ್ತದೆ ಎಂದು ಕಂಪನಿಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಡೆಂಜಿಲ್ ರಾಯನ್ ಹೇಳಿದ್ದಾರೆ.
ಉದ್ಯೋಗಿಗಳನ್ನು ಪ್ರೋತ್ಸಾಹಿಸಲು ನಗರ ಮೂಲದ ಸುರ್ಮೌಂಟ್ ಲಾಜಿಸ್ಟಿಕ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಕಾರ್ ಗಳು ಮತ್ತು ಮೋಟಾರ್ ಸೈಕಲ್ ಗಳನ್ನು ಉಡುಗೊರೆಯಾಗಿ ನೀಡಿದೆ. ಉಡುಗೊರೆಗಳಲ್ಲಿ ಟಾಟಾ ಕಾರುಗಳು, ಆಕ್ಟಿವಾ ಸ್ಕೂಟರ್‌ಗಳು ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಸೇರಿವೆ, ಇವುಗಳನ್ನು 20 ಉದ್ಯೋಗಿಗಳಿಗೆ ನೀಡಲಾಯಿತು ಎಂದು ಹೇಳಲಾಗಿದೆ.