ಬೆಂಗಳೂರು: ಪ್ರಸಕ್ತ ಸಾಲಿನ ಪದವಿ ಮತ್ತು ಸ್ನಾತಕೋತ್ತರ ಪದವಿಯ ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಕೊನೆ ಸುತ್ತಿನ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಅವಕಾಶ ಕಲ್ಪಿಸಿದೆ.
ಅರ್ಹ ಅಭ್ಯರ್ಥಿಗಳು ಡಿಸೆಂಬರ್ 23ರಿಂದ ಕೋರ್ಸ್ ಶುಲ್ಕವನ್ನು ಮುಂಗಡವಾಗಿ ಪಾವತಿಸಿ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗ ಈ ಕೋರ್ಸ್ ಗಳ ಪ್ರವೇಶಕ್ಕೆ ಡಿಸೆಂಬರ್ 31ರವರೆಗೆ ಸಮಯ ನೀಡಿದ ಹಿನ್ನೆಲೆಯಲ್ಲಿ ಬಾಕಿ ಸೀಟುಗಳ ಕೊನೆ ಸುತ್ತಿನ ಹಂಚಿಕೆ ನಡೆಸಲಾಗುತ್ತಿದೆ.
ಸದ್ಯ ಯುಜಿ ಆಯುಷ್ ನಲ್ಲಿ 436, ಪಿಜಿ ಆಯುಷ್ ನಲ್ಲಿ 201 ಸೀಟುಗಳು ಹಂಚಿಕೆಗೆ ಲಭ್ಯ ಇದ್ದು, ಅಭ್ಯರ್ಥಿಗಳು ಸದುಪಯೋಗ ಪಡೆಯಲು ಕೋರಿದೆ.