ಬೆಂಗಳೂರು: ಶ್ವೇತಾ ಅಲಿಯಾಸ್ ಗೋಲ್ಡ್ ಶ್ವೇತಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು.
ಚಿನ್ನದ ಅಂಗಡಿ ಮಾಲೀಕರಿಗೆ ಮಹಿಳೆಯಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ವರ್ತೂರು ಪ್ರಕಾಶ್ ಅವರಿಗೆ ನೋಟಿಸ್ ನೀಡಿದ್ದಾರೆ. ಇಂದು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ತೂರು ಪ್ರಕಾಶ್ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ಶ್ವೇತಾ ಎಂಬ ಮಹಿಳೆಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದರು. ವರ್ತೂರು ಪ್ರಕಾಶ್ ಅವರ ಹೆಸರು ಹೇಳಿ ವರ್ತಕರ ಬಳಿ ಮಹಿಳೆ ಚಿನ್ನ ಪಡೆದುಕೊಂಡಿದ್ದಾರೆ. ಸುಮಾರು ಎರಡೂವರೆ ಕೋಟಿ ರೂಪಾಯಿ ಚಿನ್ನವನ್ನು ಮಹಿಳೆ ಖರೀದಿಸಿದ್ದಾರೆ. ಚಿನ್ನ ಪಡೆಯುವಾಗ ವರ್ತೂರು ಪ್ರಕಾಶ್ ಮನೆಯ ವಿಳಾಸವನ್ನು ನೀಡಿದ್ದಾರೆ. ಚಿನ್ನದ ಅಂಗಡಿ ತೆರೆಯುವುದಾಗಿ ಹೇಳಿ ವಂಚಿಸಲಾಗಿದೆ. ಈ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲವೆಂದು ವರ್ತೂರು ಪ್ರಕಾಶ್ ಹೇಳಿದ್ದಾರೆ.