ಬಳ್ಳಾರಿ ಸರ್ಕಾರಿ ಬಸ್ ನಲ್ಲಿ ಭಾರಿ ಹೈಡ್ರಾಮಾ ನಡೆದಿದೆ. ಮಹಿಳೆಯ ಬ್ಯಾಗ್ ನಿಂದ ಕಳ್ಳರು ಚಿನ್ನವನ್ನು ಎಗರಿಸಿದ್ದಾರೆ ಎನ್ನಲಾಗಿದ್ದು, ಪ್ರಯಾಣಿಕರ ಸಮೇತ ಪೊಲೀಸ್ ಠಾಣೆಗೆ ಬಸ್ ಅನ್ನು ಚಾಲಕ ತಂದಿದ್ದಾನೆ.
ಹೊಸಪೇಟೆ ಠಾಣೆಯಲ್ಲಿ ಪೊಲೀಶರು ಪ್ರಯಾಣಿಕರು ಪರಿಶೀಲನೆ ನಡೆಸಿದ್ದಾರೆ. 90 ಗ್ರಾಂ ಬಂಗಾರ ಒಡವೆ ಎಗರಿಸಲಾಗಿದೆ ಎಂದು ಬಸ್ ನಲ್ಲಿದ್ದ ಮಹಿಳೆ ಅಂಬಮ್ಮ ದೂರಿದ್ದಾರೆ. ಮಹಿಳೆ ರಾದ್ಧಾಂತ ಹಿನ್ನಲೆ ಬಸ್ ಚಾಲಕ ಮತ್ತು ನಿರ್ವಾಹಕರು ಪ್ರಯಾಣಿಕರ ಸಮೇತ ಪೊಲೀಸ್ ಠಾಣೆಗೆ ಬಸ್ ತಂದಿದ್ದಾರೆ. ಹೊಸಪೇಟೆ ನಗರ ಠಾಣೆಗೆ ಬಸ್ ತರಲಾಗಿದ್ದು, ಪ್ರಯಾಣಿಕರ ತಪಾಸಣೆ ನಡೆಸಲಾಗಿದೆ. ಆದರೆ ಚಿನ್ನಾಭರಣ ಪತ್ತೆಯಾಗಿಲ್ಲ ಎನ್ನಲಾಗಿದೆ.