ಶಿವಮೊಗ್ಗ : ಟಿವಿ ರಿಮೋಟ್ ಗಾಗಿ ಮಕ್ಕಳ ನಡುವೆ ಜಗಳ ನಡೆದಿದ್ದು, ನೊಂದ ಬಾಲಕಿ ಇಲಿ ಪಾಷಾಣ ಸೇವಿಸಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸೂಳೆಬೈಲಿನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಕಲ್ಲಿಹಾಳ್ ಗ್ರಾಮದ ಸಹನಾ (16) ಎಂದು ಗುರುತಿಸಲಾಗಿದೆ. ಟಿವಿ ನೋಡುವಾಗ ರಿಮೋಟ್ ಗಾಗಿ ಮಕ್ಕಳ ನಡುವೆ ಗಲಾಟೆ ನಡೆದಿದ್ದು, ಈ ವಿಚಾರಕ್ಕೆ ಮನೆಯಲ್ಲಿ ಜಗಳ ಮಾಡಬೇಡಿ ಎಂದು ದೊಡ್ಡವರು ಬೈದಿದ್ದಾರೆ. ಇಷ್ಟಕ್ಕೆ ಮನನೊಂದ ಬಾಲಕಿ ಸಹನಾ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಚಿಕ್ಕ ಚಿಕ್ಕ ಮಕ್ಕಳು ಇಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.