ಭೋಪಾಲ್: ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ನಯಾಪುರ ಪ್ರದೇಶದಲ್ಲಿ ಶನಿವಾರ ಮುಂಜಾನೆ ಹಾಲಿನ ಪಾರ್ಲರ್ ಕಮ್ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕುಟುಂಬದ ನಾಲ್ಕು ಸದಸ್ಯರು ಸಾವನ್ನಪ್ಪಿದ್ದಾರೆ.
ಬೆಳಗಿನ ಜಾವ 4:45 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಹಾಲಿನ ಪಾರ್ಲರ್ ಮತ್ತು ಕುಟುಂಬದವರು ವಾಸವಿದ್ದ ಮನೆಯ ಆವರಣವನ್ನು ಆವರಿಸಿದೆ. ಇದರಿಂದಾಗಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕು ನಾಲ್ವರು ಮೃತಪಟ್ಟಿದ್ದಾರೆ.
ನಯಾಪುರದ ಹಾಲಿನ ಪಾರ್ಲರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ನಮಗೆ ಮಾಹಿತಿ ಬಂದಿದ್ದು, ಅದೇ ಆವರಣದಲ್ಲಿ ಕುಟುಂಬವೊಂದು ವಾಸವಿತ್ತು ಎಂದು ನಹರ್ ದರ್ವಾಜಾ ಪೊಲೀಸ್ ಠಾಣೆ ಪ್ರಭಾರಿ ಮಂಜು ಯಾದವ್ ತಿಳಿಸಿದ್ದಾರೆ.
ದೇವಾಸ್‌ನ ನಯಾಪುರ ಪ್ರದೇಶದ ಮನೆಯೊಂದರಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಮಾಹಿತ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದ್ದಾರೆ.
ಒಂದೇ ಕುಟುಂಬದ ನಾಲ್ಕು ಶವಗಳನ್ನು ಹೊರತೆಗೆಯಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಂಜು ಯಾದವ್ ಮಾಹಿತಿ ನೀಡಿದ್ದಾರೆ.
#WATCH | Madhya Pradesh | A fire broke out at a house in the Nayapura area of Dewas, during early hours. Fire tenders present at the spot.
Manju Yadav, Police Station Incharge, Nahar Darwaja PS says, “Four people have died in the incident…Further investigation is… pic.twitter.com/AWIphNcvvl
— ANI (@ANI) December 21, 2024