ನವದೆಹಲಿ: 2025 ನೇ ಸಾರಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 422 ರೂ. ನಷ್ಟು ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಇದಕ್ಕಾಗಿ 855 ಕೋಟಿ ರೂಪಾಯಿಗಳನ್ನು ಕಾಯ್ದಿಸಲಾಗಿದೆ.. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ನಿರ್ಧಾರ ಕೈಗೊಂಡಿದೆ.
ರಾಜ್ಯದ ರೈತರು ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಈ ಕುರಿತು ಮನವಿ ಮಾಡಿದ್ದು, ಕೇಂದ್ರ ಸರ್ಕಾರ ಬೆಂಬಲ ಬೆಲೆ ಹೆಚ್ಚಳ ಮಾಡಿದೆ.
2025ಕ್ಕೆ ಮಿಲ್ಲಿಂಗ್ ಕೊಬ್ಬರಿ ಬೆಂಬಲ ಬೆಲೆಯನ್ನು ಕ್ವಿಂಟಾಲ್ ಗೆ 422 ರೂ. ನಷ್ಟು ಹೆಚ್ಚಳ ಮಾಡಿ 11,582 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಉಂಡೆ ಕೊಬ್ಬರಿಗೆ ಕ್ವಿಂಟಾಲ್ ಗೆ 100 ರೂಪಾಯಿಯಷ್ಟು ಹೆಚ್ಚಳ ಮಾಡಿ 12,100 ರೂ.ಗಿ ಹೆಚ್ಚಿಸಲಾಗಿದೆ.
ಸಹಕಾರಿ ಏಜೆನ್ಸಿಗಳಾದ ನಾಫೆಡ್, ಎನ್.ಸಿ.ಸಿ.ಎಫ್. ಖರೀದಿ ನೋಡಲ್ ಏಜೆನ್ಸಿಗಳಾಗಿರುತ್ತವೆ. ಸರ್ಕಾರ 2014 ರಿಂದ 2025ರ ನಡುವಿನ ಅವಧಿಯಲ್ಲಿ ಮಿಲ್ಲಿಂಗ್ ಕೊಬ್ಬರಿ ಬೆಂಬಲ ಬೆಲೆಯನ್ನು 5,250 ರೂ.ನಷ್ಟು, ಉಂಡೆ ಕೊಬ್ಬರಿ ಬೆಲೆಯನ್ನು 5,500 ರೂ.ನಷ್ಟು ಹೆಚ್ಚಿಸಿದ್ದು, ಇದು ಶೇಕಡ 120 ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ದೇಶದಲ್ಲಿ ಕೊಬ್ಬರಿರ ಉತ್ಪಾದನೆಯು ಕರ್ನಾಟಕದಲ್ಲಿ ಶೇ.32 ರಷ್ಟು ಪಾಲು ಹೊಂದಿದ್ದು, ತಮಿಳುನಾಡು ಶೇ.25, ಕೇರಳ ಶೇ.25, ಮತ್ತು ಆಂಧ್ರಪ್ರದೇಶ ಶೇ.7.7 ರಷ್ಟು ಪಾಲು ಹೊಂದಿದೆ.
VIDEO | “Copra production in our country is highest in Karnataka with a share of 32 per cent, followed by Tamil Nadu with 25 per cent, Kerala with 25 per cent, and Andhra Pradesh with 7.7 per cent. The approval granted today includes the price for Copra at Rs 11,582 per quintal… pic.twitter.com/eAm66t20jQ
— Press Trust of India (@PTI_News) December 20, 2024