ನಿರುದ್ಯೋಗ, ಹಣದುಬ್ಬರ ಸೇರಿದಂತೆ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಲಖನೌದ ಕಾಂಗ್ರೆಸ್ ಕಚೇರಿಯಲ್ಲಿ ಯುವಕನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ.
ಗೋರಖ್ ಪುರ ನಿವಾಸಿ ಪ್ರಭಾತ್ ಪಾಂಡೆ ಮೃತ ಯುವಕ. ಕಾಂಗ್ರೆಸ್ ಪ್ರತಿಭಟನೆಅಲ್ಲಿ ಪಾಲ್ಗೊಳ್ಳಲು ಈತ ಗೋರಖ್ ಪುರದಿಂದ ಲಖನೌಗೆ ಬಂದಿದ್ದ. ಕಾಂಗ್ರೆಸ್ ಕಚೇರಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ಪ್ರಭಾತ್ ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಆತ ಸಾವನ್ನಪ್ಪಿದ್ದ ಎಂದು ವೈದ್ಯರು ದೃಢಪಡಿಸಿದ್ದರು.
ಯುವಕ ಪ್ರಭಾತ್ ಸಾವಿಗೆ ನಿಜವಾದ ಕಾರಣ ಮರಣೋತ್ತರ ಪರೀಕ್ಷೆ ಬಳಿಕ ಗೊತ್ತಾಗಲಿದೆ. ಈ ನಡುವೆ ಪ್ರಭಾತ್ ಚಿಕಪ್ಪ ಮನೀಶ್ ಪಾಂಡೆ ಹುಸೇಂಗಂಜ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಭಾತ್ ನನ್ನು ಕೊಲೆ ಮಾಡಲಾಗಿದೆ. ಆತನಿಗೆ ಯಾವುದೇ ಕಾಯಿಲೆಯಿರಲಿಲ್ಲ. ಕಾಂಗ್ರೆಸ್ ಕಚೇರಿಯಲ್ಲಿ ಆತ ಇದ್ದಕ್ಕಿದ್ದಂತೆ ಸಾಯಲ್ಯ್ ಕಾರಣವೇನು? ಕಚೇರಿಯಲ್ಲಿ ಏನೋ ನಡೆದಿರಬಹುದು ಎಂದು ಆರೋಪಿಸಿದ್ದಾರೆ. ಈ ಬಗ್ಗೆಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.