alex Certify ಮನೆಯವರ ವಿರೋಧದ ನಡುವೆಯೂ ಮದುವೆಯಾದ ಪ್ರೇಮಿಗಳಿಗೆ ಧೈರ್ಯ ತುಂಬಿದ ಎಸ್ಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯವರ ವಿರೋಧದ ನಡುವೆಯೂ ಮದುವೆಯಾದ ಪ್ರೇಮಿಗಳಿಗೆ ಧೈರ್ಯ ತುಂಬಿದ ಎಸ್ಪಿ

ಚಿಕ್ಕಮಗಳೂರು: ಪೋಷಕರ ವಿರೋಧದ ನಡುವೆಯೂ ಪ್ರೇಮಿಗಳು ಮದುವೆಯಾಗಿದ್ದು, ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಿದ್ದಾರೆ. ಈ ವೇಳೆ ಇಬ್ಬರಿಗೂ ಎಸ್ಪಿ ಡಾ. ವಿಕ್ರಮ್ ಆಮಟೆ ಧೈರ್ಯ ತುಂಬಿದ್ದಾರೆ.

ಅಂತರ್ಜಾತಿ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳು ದೇವಸ್ಥಾನವೊಂದರಲ್ಲಿ ಮದುವೆಯಾಗಿ ರಕ್ಷಣೆ ಕೋರಿ ಎಸ್ಪಿ ಕಚೇರಿಗೆ ಆಗಮಿಸಿದ್ದ ವೇಳೆ ಘಟನೆ ನಡೆದಿದೆ. ತರೀಕೆರೆ ತಾಲ್ಲೂಕು ರಂಗೇನಹಳ್ಳಿಯ ಅಜಯ್, ಭದ್ರಾವತಿಯ ಶಾಲಿನಿ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸಿದ್ದು, ಜಾತಿ ಬೇರೆ ಬೇರೆಯಾಗಿದ್ದ ಕಾರಣಕ್ಕೆ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.

ಬುಧವಾರ ದೇವಸ್ಥಾನದಲ್ಲಿ ಮದುವೆಯಾದ ಪ್ರೇಮಿಗಳು, ರಕ್ಷಣೆ ಕೋರಿ ದಲಿತ ಸಂಘಟನೆ ಮುಖಂಡರ ಮೂಲಕ ಎಸ್‌ಪಿ ವಿಕ್ರಮ್ ಆಮಟೆ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಇಬ್ಬರಿಗೂ ಧೈರ್ಯ ತುಂಬಿದ ಎಸ್ಪಿ, ಎರಡೂ ಕುಟುಂಬದವರನ್ನು ಕರೆದು ಮಾತನಾಡುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಿದ್ದಾರೆ.

ಇಬ್ಬರು ವಯಸ್ಕರಾಗಿದ್ದು, ಕಾನೂನಿನಲ್ಲಿ ಅವರ ವಿವಾಹಕ್ಕೆ ಮಾನ್ಯತೆ ಇದೆ. ಅವರ ಪೋಷಕರನ್ನು ಕರೆದು ಮಾತನಾಡುವಂತೆ ತರೀಕೆರೆ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...