ಮಂಡ್ಯ: ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ನಿಷೇಧಿತ ತಿಮಿಂಗಿಲದ ಅಂಬರ್ ಗ್ರೀಸ್ ಸಂಗ್ರಹಿಸಿದ ಆರೋಪಿಯನ್ನು ಬಂಧಿಸಲಾಗಿದೆ.
ಪಡುವಲಪಟ್ಟಣ ರಸ್ತೆಯ ನಿವಾಸಿ ಆರ್.ಸಿ. ವಿನಯಕುಮಾರ್ ಬಂಧಿತ ಆರೋಪಿ. ಈತನನ್ನು ಡಿಸೆಂಬರ್ 31ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ. ಅಕ್ರಮವಾಗಿ ಮನೆಯಲ್ಲಿ 3.10 ಕೆಜಿ ತೂಕದ ತಿಮಿಂಗಲದ ಅಂಬರ್ ಗ್ರೀಸ್ ಸಂಗ್ರಹಿಸಿದ್ದ ಖಚಿತ ಮಾಹಿತಿ ಮೇರೆಗೆ ಮೈಸೂರು ವಲಯ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಂಬರ್ ಗ್ರೀಸ್ ಮತ್ತು ಅದನ್ನು ಸಾಗಾಟ ಮಾಡಲು ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆದು, ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಧಾನ ಸಿವಿಲ್ ನ್ಯಾಯಾಧೀಶರ ಎದುರು ಆರೋಪಿ ವಿನಯ್ ಕುಮಾರ್ ನನ್ನು ಹಾಜರುಪಡಿಸಲಾಗಿದ್ದು, ಡಿಸೆಂಬರ್ 31ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ. ಇನ್ನು ಕೆಲವರು ಕೃತ್ಯದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಸಂಚಾರಿ ದಳ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.