ಬೆಳಗಾವಿ: ಹೊಸದಾಗಿ ರಚನೆಯಾದ 65 ತಾಲೂಕುಗಳ ಪೈಕಿ 27 ತಾಲ್ಲೂಕುಗಳಿಗೆ ಸರ್ಕಾರಿ ಕಟ್ಟಡ ಒದಗಿಸಲಾಗಿದೆ. ಉಳಿದ ತಾಲೂಕುಗಳಿಗೆ ಏಪ್ರಿಲ್ ನಂತರ ತಾಲೂಕು ಕಚೇರಿ ‘ಪ್ರಜಾಸೌಧ’ ಕಟ್ಟಡ ಒದಗಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಜಗದೇವ್ ಗುತ್ತೇದಾರ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಲ್ಯಾಣ ಕರ್ನಾಟಕದ ಎಲ್ಲಾ 16 ತಾಲೂಕುಗಳಿಗೆ ಪ್ರಜಾಸೌಧ ನಿರ್ಮಿಸಿ ಕಚೇರಿ ನೀಡಲಾಗಿದೆ. ಜಾಗ ಲಭ್ಯವಿದ್ದ ತಾಲೂಕುಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, 3-4 ತಾಲ್ಲೂಕುಗಳಲ್ಲಿ ಜಾಗವಿಲ್ಲದ ಕಾರಣ ಜಾಗ ಖರೀದಿಗೆ ಉದ್ದೇಶಿಸಲಾಗಿದೆ. ಹೊಸದಾಗಿ ರಚನೆಯಾಗುವ ತಾಲೂಕು ಕಚೇರಿಗಳಿಗೆ ಎಲ್ಲಾ ಕಚೇರಿಗಳ ಸ್ಥಳಾಂತರ ಮಾಡಲಾಗುವುದು ಎಂದು ಹೇಳಿದ್ದಾರೆ.