ಚೆನ್ನೈ : ಕಾರು 85 ಅಡಿ ಆಳದ ಸಮುದ್ರಕ್ಕೆ ಬಿದ್ದ ಪರಿಣಾಮ 33 ವರ್ಷದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ.ಕೊಡುಂಗೈಯೂರ್ ನಿವಾಸಿ ಮೊಹಮ್ಮದ್ ಶಾಹಿ ಕೋಸ್ಟ್ ಗಾರ್ಡ್ ಅಧಿಕಾರಿಯೊಬ್ಬರ ತಾತ್ಕಾಲಿಕ ಚಾಲಕನಾಗಿ ಕೆಲಸ ಮಾಡುತ್ತಿದ್ದರು.
ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಆದರೆ ಕಾಣೆಯಾದ ಚಾಲಕನನ್ನು ಹುಡುಕುವ ಪ್ರಯತ್ನಗಳು ವಿಫಲವಾಗಿವೆ. ಸದ್ಯ ಸಮುದ್ರದಿಂದ ಕಾರನ್ನು ಮೇಲಕ್ಕೆತ್ತಲಾಗಿದೆ.
ಪ್ಯಾಸೆಂಜರ್ ಸೀಟಿನಲ್ಲಿದ್ದ ನೌಕಾ ಸಿಬ್ಬಂದಿ ಕಾರಿನ ಕಿಟಕಿಯ ಗಾಜು ಒಡೆದು ಹೇಗೋ ಪಾರಾಗಿ ಬಂದಿದ್ದಾರೆ. ಆದರೆ ಶಾಹಿ ಸುಳಿವೇ ಸಿಕ್ಕಿಲ್ಲ ಎಂದು ವರದಿಯಾಗಿದೆ.ಚಾಲಕನ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಸ್ಥಳೀಯ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಕಾರು ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದಿದೆ ಎನ್ನಲಾಗಿದೆ.
Tamil Nadu: At Chennai port, a car fell into the sea while reversing, leaving driver Mohammed Sakhi missing. A naval personnel escaped with injuries. Search operations are underway, and local police are investigating the incident to determine the cause
(Date: 17-12-2024) pic.twitter.com/RgrFUDk090
— IANS (@ians_india) December 18, 2024