ಛತ್ತೀಸ್ಗಢದ ಅಂಬಿಕಾಪುರದಿಂದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಚಿಂದ್ಕಲೋನ್ ಗ್ರಾಮದ 35 ವರ್ಷದ ಆನಂದ್ ರಾಮ್ ಯಾದವ್ ಅವರ ಕುಟುಂಬಸ್ಥರು ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆತಂದಿದ್ದು, ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದರು.
ವಾಸ್ತವವಾಗಿ ಆನಂದ್ ರಾಮ್ 15 ವರ್ಷಗಳಿಂದ ಮಗುವನ್ನು ಹೊಂದಿರಲಿಲ್ಲ. ಮಗುವನ್ನು ಪಡೆಯುವ ಬಯಕೆಯಲ್ಲಿ ಆನಂದ್ ರಾಮ್ ಬಹಳವಾಗಿ ಚಿಂತೆಗೀಡಾಗಿದ್ದು, ನಂತರ ಗ್ರಾಮದ ಯಾರೋ ಒಬ್ಬರು ಇಲ್ಲಿನ ಒಬ್ಬ ಮಹಿಳೆಯಿಂದ ಭೂತಬಂಧನ ಮಾಡಿಸಿಕೊಂಡರೆ ಮಗು ಜನಿಸಬಹುದು ಎಂದು ಸಲಹೆ ನೀಡಿದ್ದರು.
ಒಂದು ವರ್ಷದ ಕಾಲ ಆನಂದ್ ರಾಮ್ ಮಗುವನ್ನು ಪಡೆಯುವ ಬಯಕೆಯಲ್ಲಿ ಗ್ರಾಮದ ಒಬ್ಬ ಮಹಿಳೆಯಿಂದ ಭೂತಬಂಧನ ಮಾಡಿಸಿಕೊಳ್ಳುತ್ತಿದ್ದರು. 5 ತಿಂಗಳ ಹಿಂದೆ ಅವರ ಮನೆಯಲ್ಲಿ ಮಗು ಜನಿಸಿತ್ತು. ಮಗುವಿನ ಜನನದಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣವಿತ್ತು. ಕೇವಲ 5 ದಿನಗಳ ಹಿಂದೆ, ಮೃತರು ತಮ್ಮ ಅತ್ತೆ ಮತ್ತು ಕುಟುಂಬ ಸದಸ್ಯರನ್ನು ತಮ್ಮ 5 ತಿಂಗಳ ಮಗುವಿಗೆ ಮುಂಡನ ಮಾಡಿಸಲು ಕರೆದಿದ್ದರು.
ಕುಟುಂಬ ಸದಸ್ಯರು ಹೇಳುವಂತೆ, ಮೃತ ಆನಂದ್ ರಾಮ್ ತನ್ನ ಮಗನಿಗಾಗಿ ಹರಕೆ ಮಾಡಿಕೊಂಡಿದ್ದು, ಅದನ್ನು ಪೂರೈಸಲು, ಅವರು ಹಿಂದಿನ ದಿನ 200 ರೂಪಾಯಿಗೆ ಒಂದು ಕೋಳಿಯನ್ನು ಖರೀದಿಸಿದ್ದರು. ಕುಟುಂಬ ಸದಸ್ಯರು ಕೇಳಿದಾಗ, ಅವರು ಅದನ್ನು ವಿಶೇಷ ಉದ್ದೇಶಕ್ಕಾಗಿ ತಂದಿದ್ದಾಗಿ ಹೇಳಿದ್ದರು. ಇದಾದ ನಂತರ, ತನ್ನ ಹರಕೆ ಪೂರೈಸಲು, ಜೀವಂತ ಕೋಳಿ ಮರಿಯನ್ನು ನುಂಗಿದ್ದಾರೆ. ಕೋಳಿ ನುಂಗಿದ ನಂತರ ವ್ಯಕ್ತಿ ಮೃತಪಟ್ಟಿದ್ದು, ಈ ಘಟನೆ ನಂತರ ಇಡೀ ಕುಟುಂಬ ಆಘಾತದಲ್ಲಿದೆ.
ಶವ ಪರೀಕ್ಷೆ ನಡೆಸಿದ ವೈದ್ಯರು ಈ ಪ್ರಕರಣವನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಶವಪರೀಕ್ಷೆಯ ಸಮಯದಲ್ಲಿ, ವೈದ್ಯರಿಗೆ ಯುವಕನ ಸಾವಿನ ಕಾರಣ ತಿಳಿದಿರಲಿಲ್ಲ. ಆಗ, ವೈದ್ಯರು ವ್ಯಕ್ತಿಯ ಗಂಟಲನ್ನು ಪರೀಕ್ಷಿಸಿದಾಗ ಒಂದು ಕೋಳಿ ಮರಿ ಯುವಕನ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿತ್ತು. ವೈದ್ಯರು ಹೇಳುವಂತೆ, 15 ಸಾವಿರಕ್ಕೂ ಹೆಚ್ಚು ಶವಪರೀಕ್ಷೆಗಳಲ್ಲಿ ಇಂತಹ ಆಘಾತಕಾರಿ ಪ್ರಕರಣ ಇದೇ ಮೊದಲು.