ALERT : ಸಾರ್ವಜನಿಕರೇ ಎಚ್ಚರ : ವಾಟ್ಸಾಪ್’ ನಲ್ಲಿ ‘ಮದುವೆ ಆಮಂತ್ರಣ’ ದ ಲಿಂಕ್ ತೆರೆಯುವ ಮುನ್ನ ಈ ಸುದ್ದಿ ಓದಿ..!

ಬೆಂಗಳೂರು : ಈಗಂತೂ ಡಿಜಿಟಲ್ ಯುಗ. ಎಲ್ಲವೂ ಆನ್ ಲೈನ್ ಮಯ. ಆನ್ ಲೈನ್ ಎಷ್ಟು ಉಪಯೋಗವಾಗುತ್ತಿದೆಯೋ..ಅಷ್ಟೇ ಅಪಾಯಕಾರಿಯಾಗುತ್ತಿದೆ.ಸೈಬರ್ ವಂಚಕರು ಹಲವು ತಂತ್ರಗಳನ್ನು ಬಳಸಿಕೊಂಡು ಅಮಾಯಕರನ್ನು ವಂಚಿಸುತ್ತಿದ್ದಾರೆ.

ಇದೀಗ ಮದುವೆ ಆಮಂತ್ರಣದ ಲಿಂಕ್ ಮೂಲಕ ಖದೀಮರು ವೈಯಕ್ತಿಕ ಮಾಹಿತಿ ಕದಿಯುತ್ತಿದ್ದಾರೆ.
ಮದುವೆ ಸೀಸನ್ ನಲ್ಲಿ ವಂಚಕರು ಮದುವೆ ಆಮಂತ್ರಣ ಪತ್ರಿಕೆಗಳ ನೆಪದಲ್ಲಿ ಮಾಲ್ ವೇರ್ ಹರಡುತ್ತಿದ್ದಾರೆ.

ಡಿಜಿಟಲ್ ಮದುವೆ ಆಹ್ವಾನವು ನಿಮ್ಮನ್ನು ಬಲೆಗೆ ಸಿಲುಕಿಸದಂತೆ ನೋಡಿಕೊಳ್ಳಿ! ವೈಯಕ್ತಿಕ ಮಾಹಿತಿಯನ್ನು ಕದಿಯಲು ವಂಚಕರು ವಾಟ್ಸಾಪ್ ಅನ್ನು ಬಳಸುತ್ತಿದ್ದಾರೆ. ಜಾಣರಾಗಿರಿ – ಅನುಮಾನಾಸ್ಪದ ಸಂದೇಶಗಳನ್ನು 1930 ಗೆ ವರದಿ ಮಾಡಿ ಎಂದು ಬೆಂಗಳೂರು ನಗರ ಪೊಲೀಸರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read