ಬೆಳಗಾವಿ: ಗ್ಯಾರಂಟಿಗಳ ಅನುಷ್ಠಾನ, 7ನೇ ವೇತನ ಆಯೋಗದ ಶಿಫಾರಸು ಜಾರಿಯ ನಂತರ ರಾಜ್ಯದಲ್ಲಿ ಬಂಡವಾಳ ವೆಚ್ಚ ಕುಸಿತವಾಗಿ ರಾಜ್ಯಸ್ವ ಕೊರತೆ ಹೆಚ್ಚಾಗಿದೆ.
ರಾಜತ್ವ ಕೊರತೆ 27,354 ಕೋಟಿ ರೂಪಾಯಿಗೆ ತಲುಪಿದೆ ಎಂದು ರಾಜ್ಯದ ಹಣಕಾಸಿನ ಮಧ್ಯವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕೊರತೆ ಸರಿದೂಗಿಸಲು ತೆರಿಗೆ ದರ ಪರಿಷ್ಕರಣೆ ಸಾರ್ವಜನಿಕ ಬಳಕೆದಾರರ ಶುಲ್ಕ ಪರಿಷ್ಕರಣೆಗೆ ಕ್ರಮ ಕೈಗೊಳ್ಳುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಗ್ಯಾರಂಟಿಗಳ ಅನುಷ್ಟಾನದ ನಂತರ ಬಂಡವಾಳ ವೆಚ್ಚ ಕುಸಿದು ರಾಜಸ್ವ ಕೊರತೆ ಹೆಚ್ಚಳವಾಗಿದೆ. ಹಣಕಾಸು ವರ್ಷಾಂತ್ಯಕ್ಕೆ ರಾಜ್ಯದ ಸಾಲ 6.65 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಲಿದೆ. ರಾಜ್ಯ ಸರ್ಕಾರ 7ನೇ ವೇತನ ಆಯೋಗದ ಶಿಫಾರಸ್ಸಿನ ಅನುಷ್ಠಾನ ಮಾಡಿದ್ದರಿಂದ ರಾಜಸ್ವ ಕೊರತೆ ಉಂಟಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬದ್ಧತಾ ವೆಚ್ಚಗಳಾದ ವೇತನ, ಪಿಂಚಣಿ, ಬಡ್ಡಿ ಪಾವತಿ, ಸಹಾಯಧನ ಹೆಚ್ಚಳದಿಂದ ರಾಜಸ್ವ ಕೊರತೆ ಉಂಟಾಗಿದೆ. ಇದನ್ನು ಸರಿಗಟ್ಟಲು ತೆರಿಗೆ ದರಗಳನ್ನು ಪರಿಷ್ಕರಣೆ ಮಾಡುವ ಜೊತೆಗೆ ಸಾರ್ವಜನಿಕ ಸೇವೆಗಳಿಗೆ ವಿಧಿಸುವ ಬಳಕೆದಾರರ ಶುಲ್ಕ ಪರಿಷ್ಕರಿಸಲಾಗುವುದು ಎಂದು ಸರ್ಕಾರ ವರದಿಯಲ್ಲಿ ತಿಳಿಸಿದೆ.