HomeKarnatakaಪ್ರತಿಷ್ಠಿತ ಸಿಟಿ ಕೋ - ಆಪರೇಟಿವ್‌ ಬ್ಯಾಂಕ್‌ ಚುನಾವಣೆಗೆ ಸುನಿಲ್‌ ಕುಮಾರ್‌ ನಾಮಪತ್ರ ಸಲ್ಲಿಕೆ

ಪ್ರತಿಷ್ಠಿತ ಸಿಟಿ ಕೋ – ಆಪರೇಟಿವ್‌ ಬ್ಯಾಂಕ್‌ ಚುನಾವಣೆಗೆ ಸುನಿಲ್‌ ಕುಮಾರ್‌ ನಾಮಪತ್ರ ಸಲ್ಲಿಕೆ

ಡಿಸೆಂಬರ್‌ 29 ರ ಭಾನುವಾರದಂದು ಶಿವಮೊಗ್ಗ ನಗರದ ಪ್ರತಿಷ್ಠಿತ ಸಿಟಿ ಕೋ – ಆಪರೇಟಿವ್‌ ಬ್ಯಾಂಕ್‌ ಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಈಗಾಗಲೇ ಆರಂಭವಾಗಿದೆ.

ಈ ಚುನಾವಣೆಯಲ್ಲಿ ಮರಾಠ ಸಮಾಜದ ಪ್ರಮುಖರಾದ ಎಸ್. ಸುನಿಲ್‌ ಕುಮಾರ್‌ ಇಂದು ನಾಮಪತ್ರ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಅವರೊಂದಿಗೆ ಸ್ನೇಹಿತರು ಆಪಾರ ಸಂಖ್ಯೆಯಲ್ಲಿ ಹಾಜರಿದ್ದರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಸುನಿಲ್‌ ಕುಮಾರ್‌, ಈ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಸಿಟಿ ಕೋ – ಆಪರೇಟಿವ್‌ ಬ್ಯಾಂಕ್‌ ಸದಸ್ಯರಲ್ಲಿ ಮನವಿ ಮಾಡಿದರಲ್ಲದೇ, ತಾವು ಆಯ್ಕೆಯಾದರೆ ಷೇರುದಾರರ ಹಿತ ಕಾಪಾಡಲು ಶ್ರಮಿಸುವುದಾಗಿ ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಟಿ ಕೋ – ಆಪರೇಟಿವ್ ಬ್ಯಾಂಕ್ ಚುನಾವಣೆಯು ಡಿಸೆಂಬರ್ 29 ರ ಭಾನುವಾರ ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿರುವ ವಾಸವಿ ಸ್ಕೂಲ್ ಆವರಣದಲ್ಲಿ ನಡೆಯಲಿದ್ದು, ಬೆಳಿಗ್ಗೆ 9:00 ರಿಂದ ಸಂಜೆ 4:00 ಗಂಟೆಯವರೆಗೆ ಮತದಾನ ಪ್ರಕ್ರಿಯೆ ಇರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular